ಹತ್ರಾಸ್ ಪ್ರಕರಣ: ಮುಖ್ಯ ಆರೋಪಿ ತಲೆಗೆ ಒಂದು ಲಕ್ಷ ರೂ. ಬಹುಮಾನ ಘೋಷಣೆ

ತಮ್ಮ ಪುತ್ರಿಗೆ ಕಿರುಕುಳ ನೀಡಿದ್ದರ ವಿರುದ್ಧ ದೂರು ನೀಡಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಎರಡು ದಿನಗಳ ನಂತರ, ಪೊಲೀಸರು ಸಾಸ್ನಿ ಪ್ರದೇಶದ ನೊಜಲ್‌ಪುರ ಗ್ರಾಮದ ಪ್ರಮುಖ ಆರೋಪಿ ಗೌರವ್ ಸೊಂಗ್ರಾ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಿಸಲಾಗಿದೆ.

Published: 03rd March 2021 02:55 PM  |   Last Updated: 03rd March 2021 02:55 PM   |  A+A-


farmer murder

ರೈತನ ಹತ್ಯೆ

Posted By : Vishwanath S
Source : UNI

ಹತ್ರಾಸ್(ಉತ್ತರಪ್ರದೇಶ): ತಮ್ಮ ಪುತ್ರಿಗೆ ಕಿರುಕುಳ ನೀಡಿದ್ದರ ವಿರುದ್ಧ ದೂರು ನೀಡಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಎರಡು ದಿನಗಳ ನಂತರ, ಪೊಲೀಸರು ಸಾಸ್ನಿ ಪ್ರದೇಶದ ನೊಜಲ್‌ಪುರ ಗ್ರಾಮದ ಪ್ರಮುಖ ಆರೋಪಿ ಗೌರವ್ ಸೊಂಗ್ರಾ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಿಸಲಾಗಿದೆ. 

ಇತರ ಇಬ್ಬರು ಆರೋಪಿಗಗಳ ಸುಳಿವಿಗೆ ತಲಾ 25 ಸಾವಿರ ರೂ. ಬಹುಮಾನವನ್ನೂ ಘೋಷಿಸಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. 

ಕಳೆದ ಸೋಮವಾರ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಹಾಡ ಹಗಲೇ ಗುಂಡಿಕ್ಕಿ ಸಾಯಿಸಲಾಗಿತ್ತು. ಗೌರವ್ ಸೊಂಗ್ರಾ ತನ್ನ ಮನೆಗೆ ನುಗ್ಗಿ ತನ್ನ ಪುತ್ರಿಯನ್ನು ಚುಡಾಯಿಸಿದ್ದಾನೆ ಎಂದು ರೈತ ಸುಮಾರು ಎರಡೂವರೆ ವರ್ಷಗಳ ಹಿಂದೆ ಪ್ರಕರಣ ದಾಖಲಿಸಿದ್ದ. ಆರೋಪಿ ಗೌರವ್ ರೈತನ ಕಿರಿಯ ಮಗಳನ್ನು ಮದುವೆಯಾಗಲು ಮತ್ತು ಪ್ರಕರಣವನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದ. 

ಗುಂಡೇಟಿಗೆ ಬಲಿಯಾದ ವ್ಯಕ್ತಿಯ ಪುತ್ರಿ ಆರು ಜನರ ವಿರುದ್ಧ ಲಿಖಿತ ದೂರು ನೀಡಿದ್ದು, ಇದರಲ್ಲಿ ನಾಲ್ವರನ್ನು ಗುರುತಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಒಬ್ಬನನ್ನು ಈಗಾಗಲೇ ಬಂಧಿಸಲಾಗಿದ್ದು, ಇತರ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.

ಎಲ್ಲಾ ಆರೋಪಿಗಳ ವಿರುದ್ಧ ಎನ್‌ಎಸ್‌ಎ ಅಡಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp