ವಿಶ್ವ ವನ್ಯಜೀವಿ ದಿನ: ಅರಣ್ಯ, ಪ್ರಾಣಿ ರಕ್ಷಣೆಗಳ ಪ್ರಯತ್ನ ನಿರಂತರವಾಗಿ ನಡೆಯಬೇಕು- ಪ್ರಧಾನಿ ಮೋದಿ

ಅರಣ್ಯ ರಕ್ಷಣೆ ಮತ್ತು ಪ್ರಾಣಿಗಳಿಗೆ ಸುರಕ್ಷಿತ ಆವಾಸ್ಥಾನ ಕಲ್ಪಿಸಿಕೊಡುವಂತಹ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋಗಿಯವರು ಬುಧವಾರ ಹೇಳಿದ್ದಾರೆ.

Published: 03rd March 2021 11:26 AM  |   Last Updated: 03rd March 2021 12:11 PM   |  A+A-


PM modi

ಪ್ರಧಾನಿ ಮೋದಿ

Posted By : Manjula VN
Source : ANI

ನವದೆಹಲಿ: ಅರಣ್ಯ ರಕ್ಷಣೆ ಮತ್ತು ಪ್ರಾಣಿಗಳಿಗೆ ಸುರಕ್ಷಿತ ಆವಾಸ್ಥಾನ ಕಲ್ಪಿಸಿಕೊಡುವಂತಹ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋಗಿಯವರು ಬುಧವಾರ ಹೇಳಿದ್ದಾರೆ.

ವಿಶ್ವ ವನ್ಯಜೀವಿ ದಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಗಳು, ವಿವಿಧ ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ವನ್ಯಜೀವಿ ಸಂರಕ್ಷಣೆಗಾಗಿ ಕೆಲಸ ಮಾಡುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ವಿಶ್ವ ವನ್ಯಜೀವಿ ದಿನ ಹಿನ್ನೆಲೆಯಲ್ಲಿ ಹುಲಿ, ಸಿಂಹ, ಚಿರತೆ ಸೇರಿದಂತೆ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾಧ್ಯವಿರುವಲ್ಲೆಲ್ಲಾ ಅರಣ್ಯಗಳ ರಕ್ಷಣೆ ಮತ್ತು ಪ್ರಾಣಿಗಳಿಗೆ ಸುರಕ್ಷಿತ ಆವಾಸಸ್ಥಾನಗಳನ್ನು ಕಲ್ಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp