'ನೀವು ಹೆತ್ತ ಮಕ್ಕಳ ಶಿಕ್ಷಣ ವೆಚ್ಚವನ್ನು ಸರ್ಕಾರ ಏಕೆ ಭರಿಸಬೇಕು': ಮಹಿಳೆಯರಿಗೆ ಬೈದ ಬಿಜೆಪಿ ಶಾಸಕ!
ನೀವು ಹೆತ್ತ ಮಕ್ಕಳ ಶಿಕ್ಷಣ ವೆಚ್ಚವನ್ನು ಸರ್ಕಾರ ಏಕೆ ಭರಿಸಬೇಕು ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಮಹಿಳೆಯರಿಗೆ ಬೈದಿರುವ ವಿಡಿಯೋವೊಂದು ವೈರಲ್ ಆಗಿದೆ.
Published: 03rd March 2021 11:26 PM | Last Updated: 04th March 2021 12:57 PM | A+A A-

ಬಿಜೆಪಿ ಶಾಸಕ ರಮೇಶ್ ದಿವಾಕರ್
ಲಖನೌ: ನೀವು ಹೆತ್ತ ಮಕ್ಕಳ ಶಿಕ್ಷಣ ವೆಚ್ಚವನ್ನು ಸರ್ಕಾರ ಏಕೆ ಭರಿಸಬೇಕು ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಮಹಿಳೆಯರಿಗೆ ಬೈದಿರುವ ವಿಡಿಯೋವೊಂದು ವೈರಲ್ ಆಗಿದೆ.
ಭಾನುವಾರ ಈ ಘಟನೆ ನಡೆದಿದೆ. ಸಾರ್ವಜನಿಕರ ಸಂವಾದ ವೇಳೆಯಲ್ಲಿ ಮಹಿಳೆಯರ ಗುಂಪೊಂದು ಖಾಸಗಿ ಶಾಲೆಗಳ ಮಕ್ಕಳ ಶುಲ್ಕವನ್ನು ಭರಿಸುವಂತೆ ಔರಿಯಾ ಶಾಸಕ ರಮೇಶ್ ದಿವಾಕರ್ ಅವರನ್ನು ಕೇಳಿಕೊಂಡಿದ್ದಾರೆ.
ಆಗ ಪ್ರತಿಕ್ರಿಯಿಸಿರುವ ಶಾಸಕರು, ನೀವು ಹೆತ್ತ ಮಕ್ಕಳ ಶಿಕ್ಷಣ ವೆಚ್ಚವನ್ನು ಸರ್ಕಾರ ಏಕೆ ಭರಸಬೇಕು ಎಂದು ಮಹಿಳೆಯರಿಗೆ ಶಾಸಕರಿಗೆ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಶುಲ್ಕ ಇಲ್ಲ. ನೀವು ಹಣ ಮತ್ತು ಶಿಫಾರಸ್ಸಿಗಾಗಿ ನಮ್ಮ ಹತ್ತಿರ ಬರುತ್ತೀರಿ. ಸರ್ಕಾರ ಆಹಾರ, ಬಟ್ಟೆ ಎಲ್ಲವನ್ನೂ ಉಚಿತವಾಗಿ ಕೊಡುತ್ತಿದೆ ಎಂದು ಶಾಸಕರು ರೇಗಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಮೀರ್ ಸಿಂಗ್, ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಮಹಿಳೆಯರೊಂದಿಗೆ ಯಾರೂ ಕೂಡಾ ಅಗೌರವವಾಗಿ ಮಾತನಾಡಬಾರದು. ಸರ್ಜ ಜನಾಂಗದಲ್ಲಿ ಬಿಜೆಪಿ ಪಕ್ಷ ನಂಬಿಕೆ ಇಟ್ಟಿದೆ. ಒಂದು ವೇಳೆ ಯಾವುದೇ ದೂರಿದ್ದರೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಬಿಜೆಪಿ ಶಾಸಕರ ಹೇಳಿಕೆ ದುರದೃಷ್ಟಕರ. ಖಂಡನಾರ್ಹವಾದದ್ದು, ಅದು ಬಿಜೆಪಿಯ ವರ್ತನೆಯಾಗಿದೆ ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌದರಿ ಹೇಳಿದ್ದಾರೆ.