ಕೊನೆಗೂ ಸಚಿವ ಸಂಜಯ್ ರಾಥೋಡ್ ರಾಜೀನಾಮೆ ಅಂಗೀಕರಿಸಿದ ಮಹಾರಾಷ್ಟ್ರ ರಾಜ್ಯಪಾಲರು

ಮಹಿಳೆಯ ಸಾವಿನಲ್ಲಿ ಸಚಿವರ ಪಾತ್ರ ಇದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಂಜಯ್ ರಾಥೋಡ್ ಅವರು ಅರಣ್ಯ ಸಚಿವ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್....

Published: 04th March 2021 08:23 PM  |   Last Updated: 04th March 2021 08:23 PM   |  A+A-


rathod

ಸಂಜಯ್ ರಾಥೋಡ್

Posted By : Lingaraj Badiger
Source : PTI

ಮುಂಬೈ: ಮಹಿಳೆಯ ಸಾವಿನಲ್ಲಿ ಸಚಿವರ ಪಾತ್ರ ಇದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಂಜಯ್ ರಾಥೋಡ್ ಅವರು ಅರಣ್ಯ ಸಚಿವ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ನಾಲ್ಕು ದಿನಗಳ ನಂತರ ಗುರುವಾರ ಅಂಗೀಕರಿಸಿದ್ದಾರೆ.

ರಾಥೋಡ್ ಅವರ ರಾಜೀನಾಮೆ ಅಂಗೀಕರಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಾಡಿದ್ದ ಶಿಫಾರಸನ್ನು ರಾಜ್ಯಪಾಲರಿಗೆ ಅಂಗೀಕರಿಸಿದ್ದು, ಅರಣ್ಯ ಖಾತೆಯ ಉಸ್ತುವಾರಿಯನ್ನು ಸಿಎಂಗೆ ನೀಡಲಾಗಿದೆ ಎಂದು ರಾಜಭವನ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.

ಫೆಬ್ರವರಿ 8 ರಂದು ಪುಣೆಯಲ್ಲಿ ಶವವಾಗಿ ಪತ್ತೆಯಾದ ಬೀಡ್ ಜಿಲ್ಲೆಯ ನಿವಾಸಿ ಪೂಜಾ ಚವಾಣ್(23) ಅವರ ಸಾವಿಗೆ ಶಿವಸೇನಾ ಶಾಸಕ, ಮಾಜಿ ಸಚಿವ ಸಂಜಯ್ ರಾಥೋಡ್ ಅವರು ಕಾರಣ ಎಂದು ಆರೋಪಿಸಲಾಗಿತ್ತು. ಹೀಗಾಗಿ ರಾಥೋಡ್ ಅವರು ಕಳೆದ ಭಾನುವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಥೋಡ್ ಅವರು ಮೃತ ಯುವತಿ ಜತೆ ಇರುವ ಚಿತ್ರಗಳು, ಆಡಿಯೋ ಮತ್ತು ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಸಚಿವರಿಗೆ ಮಹಿಳೆಯೊಂದಿಗೆ ಸಂಪರ್ಕ ಇದೆ ಎಂದು ಆರೋಪಿಸಿದ್ದ ಬಿಜೆಪಿ, ರಾಥೋಡ್ ರಾಜೀನಾಮೆಗೆ ಒತ್ತಾಯಿಸಿತ್ತು.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp