ಉತ್ತರ ಪ್ರದೇಶ ಜೈಲರ್ ಹತ್ಯೆ ಪ್ರಕರಣದ ಆರೋಪಿ ಎನ್ ಕೌಂಟರ್ ನಲ್ಲಿ ಸಾವು

ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್ ಟಿಎಫ್) ಉತ್ತರ ಪ್ರದೇಶದ ಜೈಲರ್ ಹತ್ಯೆ ಪ್ರಕರಣದ ಆರೋಪಿಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದೆ. 

Published: 04th March 2021 12:11 PM  |   Last Updated: 04th March 2021 12:11 PM   |  A+A-


Men involved in UP jailer's murder killed

ಉತ್ತರ ಪ್ರದೇಶ ಜೈಲರ್ ಹತ್ಯೆ ಪ್ರಕರಣದ ಆರೋಪಿ ಎನ್ ಕೌಂಟರ್ ನಲ್ಲಿ ಸಾವು

Posted By : Srinivas Rao BV
Source : Online Desk

ಪ್ರಯಾಗ್ ರಾಜ್: ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್ ಟಿಎಫ್) ಉತ್ತರ ಪ್ರದೇಶದ ಜೈಲರ್ ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದೆ. 

ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ಇಬ್ಬರು ಕ್ರಿಮಿನಲ್ ಗಳನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳಿ 2013 ರಲ್ಲಿ ಉತ್ತರ ಪ್ರದೇಶದ ಉಪ ಜೈಲರ್ ಹತ್ಯೆಯಲ್ಲಿ ಭಾಗಿಯಾಗಿದ್ದರು. 

ಇಬ್ಬರೂ ಆರೋಪಿಗಳು ಮುನ್ನಾ ಬಜರಂಗಿ ಗ್ಯಾಂಗ್ ಹಾಗೂ ಶಾರ್ಪ್ ಶೂಟರ್ ದಿಲೀಪ್ ಮಿಶ್ರಾ ಗ್ಯಾಂಗ್ ನ ಸದಸ್ಯರಾಗಿದ್ದಾರೆ. 

ಮಾ.03 ರಂದು ರಾತ್ರಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ರೌಡಿಗಳನ್ನು ಹತ್ಯೆ ಮಾಡಲಾಗಿದ್ದು, ಆರೋಪಿಗಳಿಂದ 30 ಎಂಎಂ ಹಾಗೂ 9ಎಂಎಂ ಪಿಸ್ತೂಲ್ ಗಳನ್ನು, ಜೀವಂತ ಕಾರ್ಟ್ರಿಡ್ಜ್ ವಶಕ್ಕೆ ಪಡೆಯಲಾಗಿದೆ. 

ಈ ಆರೋಪಿಗಳು 2013 ರಲ್ಲಿ ಜೈಲರ್ ಅನಿಲ್ ಕುಮಾರ್ ತ್ಯಾಗಿ ಅವರನ್ನು ಗ್ಯಾಂಗ್ಸ್ಟರ್ ಮುನ್ನಾ ಬಜರಂಗಿ ಹಾಗೂ ಮುಖ್ತಾರ್ ಅನ್ಸಾರಿ ಅಣತಿಯಂತೆ ಹತ್ಯೆ ಮಾಡಿದ್ದರು. ಈಗ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿರುವ ವ್ಯಕ್ತಿಗಳನ್ನು ವಕೀಲ್ ಪಾಂಡೆ ಅಲಿಯಾಸ್ ರಾಜೀವ್ ಪಾಂಡೆ, ಹೆಚ್ಎಸ್ ಅಹ್ಮದ್ ಅಲಿಯಾಸ್ ಪಿಂಟು ಎಂದು ಗುರುತಿಸಲಾಗಿದೆ. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp