ಪ್ರೇಕ್ಷಕರಿಗೆ ಉತ್ತಮ ಅನುಭವನ್ನುಂಟು ಮಾಡಲು ಸರ್ಕಾರದೊಂದಿಗೆ ಒಟಿಟಿ ಉದ್ಯಮ ಪಾಲುದಾರಿಕೆ- ಜಾವಡೇಕರ್ 

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ಒಟಿಟಿ ಉದ್ಯಮದ ಪ್ರತಿನಿಧಿಗಳನ್ನು ಗುರುವಾರ ಭೇಟಿ ಮಾಡಿದ್ದು, ಸರ್ಕಾರದ ಹೊಸ ಮಾರ್ಗಸೂಚಿಯನ್ನು ಅವರು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

Published: 04th March 2021 10:18 PM  |   Last Updated: 04th March 2021 10:19 PM   |  A+A-


Javdekar1

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

Posted By : Nagaraja AB
Source : The New Indian Express

ನವದೆಹಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ಒಟಿಟಿ ಉದ್ಯಮದ ಪ್ರತಿನಿಧಿಗಳನ್ನು ಗುರುವಾರ ಭೇಟಿ ಮಾಡಿದ್ದು, ಸರ್ಕಾರದ ಹೊಸ ಮಾರ್ಗಸೂಚಿಯನ್ನು ಅವರು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

ಪ್ರೇಕ್ಷಕರಿಗೆ ವೇದಿಕೆಯ ಉತ್ತಮ ಅನುಭವನ್ನುಂಟು ಮಾಡಲು ಸಚಿವಾಲಯದೊಂದಿಗೆ ಒಟಿಟಿ ಉದ್ಯಮ ಪಾಲುದಾರರಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಒಟಿಟಿ ಉದ್ಯಮದ ಪ್ರತಿನಿಧಿಗಳ ಜೊತೆಗಿನ ಮಾತುಕತೆ ಫಲಪ್ರದವಾಗಿದೆ. ಒಟಿಟಿ ನಿಯಮಗಳಲ್ಲಿನ ವಿನಾಯಿತಿ ಬಗ್ಗೆ ವಿವರಿಸಲಾಗಿದೆ. ಎಲ್ಲಾ ಪ್ರತಿನಿಧಿಗಲು ಹೊಸ ಮಾರ್ಗಸೂಚಿಯನ್ನು ಸ್ವಾಗತಿಸಿದ್ದಾರೆ. ಎಲ್ಲಾ ಪ್ರೇಕ್ಷಕರಿಗೆ  ಉತ್ತಮ ವೇದಿಕೆಯ ಅನುಭವನ್ನುಂಟು ಮಾಡಲು ಉದ್ಯಮ,ಸಚಿವಾಲಯದೊಂದಿಗೆ ಪಾಲುದಾರರಾಗುವುದಾಗಿ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

 

ಆದಾಗ್ಯೂ, ಸಭೆ ಬಗ್ಗೆ ಹೆಚ್ಚಿನ ವಿವರ ಸದ್ಯಕ್ಕೆ ತಿಳಿದುಬಂದಿಲ್ಲ. ಸರ್ಕಾರ ಫೆಬ್ರವರಿ 25 ರಂದು ಒಟಿಟಿ ಫ್ಲಾಟ್ ಫಾರ್ಮ್ ಮತ್ತು ಡಿಜಿಟಲ್ ನ್ಯೂಸ್ ಮೀಡಿಯಾಗಳಿಗೆ  ಗಳಿಗೆ ಹೊಸ ನಿಯಮ ಮತ್ತು ಮಾರ್ಗಸೂಚಿಗಳನ್ನು ಹೊರಡಿಸಿತ್ತು. 

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp