ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಪ್ರಧಾನಿ ಮೋದಿ ಕರೆ
ಸ್ವಾವಲಂಬಿ ಭಾರತವನ್ನು ನಿರ್ಮಿಸಲು ನರ್ಸರಿ ಪೂರ್ವದಿಂದ ಪಿಎಚ್ಡಿ ಹಂತದವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತ್ವರಿತವಾಗಿ ಜಾರಿಗೆ ತರುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Published: 04th March 2021 12:42 AM | Last Updated: 04th March 2021 12:42 AM | A+A A-

ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಸ್ವಾವಲಂಬಿ ಭಾರತವನ್ನು ನಿರ್ಮಿಸಲು ನರ್ಸರಿ ಪೂರ್ವದಿಂದ ಪಿಎಚ್ಡಿ ಹಂತದವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತ್ವರಿತವಾಗಿ ಜಾರಿಗೆ ತರುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತ ವೆಬ್ನಾರ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ವರ್ಷದ ಬಜೆಟ್ನಲ್ಲಿ ಆರೋಗ್ಯದ ನಂತರದ ಎರಡನೇ ಅತಿ ದೊಡ್ಡ ಆದ್ಯತೆ ಶಿಕ್ಷಣ, ಕೌಶಲ್ಯ, ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.
ಸ್ವಾವಲಂಬಿ ಭಾರತವನ್ನು ನಿರ್ಮಿಸಲು ದೇಶದ ಯುವಕರ ವಿಶ್ವಾಸವೂ ಅಷ್ಟೇ ಮುಖ್ಯ. ಯುವಜನರು ತಮ್ಮ ಶಿಕ್ಷಣ ಮತ್ತು ಜ್ಞಾನದ ಮೇಲೆ ಸಂಪೂರ್ಣ ನಂಬಿಕೆ ಇಟ್ಟಾಗ ಮಾತ್ರ ವಿಶ್ವಾಸ ಬರುತ್ತದೆ. ಅವರ ಅಧ್ಯಯನಗಳು ತಮ್ಮ ಕೆಲಸವನ್ನು ಮಾಡಲು ಅವಕಾಶವನ್ನು ನೀಡುತ್ತವೆ ಮತ್ತು ಅಗತ್ಯ ಕೌಶಲ್ಯಗಳನ್ನು ಸಹ ನೀಡುತ್ತವೆ ಎಂದು ತಿಳಿದಾಗ ಮಾತ್ರ ಆತ್ಮವಿಶ್ವಾಸ ಬರುತ್ತದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಚಿಂತನೆಯೊಂದಿಗೆ ತಯಾರಿಸಲಾಗಿದೆ ಎಂದು ಅವರು ಹೇಳಿದರು.