ಪುಶ್-ಅಪ್ಸ್, ಬಿರಿಯಾನಿ, ಡ್ಯಾನ್ಸ್: ತಮಿಳು ನಾಡಲ್ಲಿ ರಾಹುಲ್ ಗಾಂಧಿ ಪ್ರಚಾರ ಶೈಲಿಗೆ ಮತಗಳು ಬೀಳಲಿವೆಯೇ?

ರಾಜಕೀಯ ನಾಯಕರು ಪ್ರಚಾರ ನೆಪದಲ್ಲಿ ಸಾರ್ವಜನಿಕರಿಗೆ ಹೆಚ್ಚು ಆಪ್ತವಾಗುತ್ತಾರೆ, ಬಿಳಿ ಖಾದಿ ಜುಬ್ಬಾ, ಪ್ಯಾಂಟ್ ಅಥವಾ ಪಂಚೆ-ಶರ್ಟ್ ಇದು ಸಾಮಾನ್ಯವಾಗಿ ರಾಜಕೀಯ ನಾಯಕರ ಡ್ರೆಸ್ ಕೋಡ್. ಸಾಮೂಹಿಕ ಭಾಷಣ, ರ್ಯಾಲಿ, ಚರ್ಚೆ ಇತ್ಯಾದಿಗಳ ಮೂಲ

Published: 04th March 2021 10:01 AM  |   Last Updated: 04th March 2021 12:59 PM   |  A+A-


the Congress MP doing push-ups at a school in Kanniyakumari

ಕನ್ಯಾಕುಮಾರಿಯಲ್ಲಿ ವಿದ್ಯಾರ್ಥಿನಿ ಮುಂದೆ ಪುಶ್ ಅಪ್ಸ್ ಮಾಡಿದ ರಾಹುಲ್ ಗಾಂಧಿ

Posted By : Sumana Upadhyaya
Source : The New Indian Express

ಚೆನ್ನೈ: ರಾಜಕೀಯ ನಾಯಕರು ಮತ್ತು ಸಾಮಾನ್ಯ ವ್ಯಕ್ತಿಗಳ ನಡುವಿನ ಸಂಬಂಧಗಳ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಚುನಾವಣೆ ಸಮಯದಲ್ಲಿ ರಾಜಕೀಯ ನಾಯಕರು ಪ್ರಚಾರ ನೆಪದಲ್ಲಿ ಸಾರ್ವಜನಿಕರಿಗೆ ಹೆಚ್ಚು ಆಪ್ತವಾಗುತ್ತಾರೆ, ಬಿಳಿ ಖಾದಿ ಜುಬ್ಬಾ, ಪ್ಯಾಂಟ್ ಅಥವಾ ಪಂಚೆ-ಶರ್ಟ್ ಇದು ಸಾಮಾನ್ಯವಾಗಿ ರಾಜಕೀಯ ನಾಯಕರ ಡ್ರೆಸ್ ಕೋಡ್. ಸಾಮೂಹಿಕ ಭಾಷಣ, ರ್ಯಾಲಿ, ಚರ್ಚೆ ಇತ್ಯಾದಿಗಳ ಮೂಲಕವೇ ಚುನಾವಣಾ ಪ್ರಚಾರ ನಡೆಸುತ್ತಾರೆ. ಇದು ಭಾರತದ ಪ್ರಜಾಪ್ರಭುತ್ವದಲ್ಲಿ ಕಂಡುಬರುವ ರಾಜಕೀಯ ನಾಯಕರ ಚಿತ್ರಣ.

ಆದರೆ ಈ ಇಮೇಜ್ ನ್ನು ಈ ಬಾರಿ ತಮಿಳು ನಾಡು ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಬದಲಿಸಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ತಮ್ಮ ಪಕ್ಷವನ್ನು ಜನರಿಗೆ ಹತ್ತಿರವಾಗಲು ಯತ್ನಿಸುತ್ತಿದ್ದಾರೆ. ಪ್ರಚಾರದ ಶೈಲಿಯನ್ನು ಬದಲಿಸಿಕೊಂಡಿದ್ದಾರೆ, ಜನರನ್ನು ಆಕರ್ಷಿಸುವಲ್ಲಿ ಅವರು ಸಫಲರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ವರ್ಷದ ಆರಂಭದಲ್ಲಿ ಪೊಂಗಲ್ ಸಮಯದಲ್ಲಿ ತಮಿಳು ನಾಡಿನ ಮಧುರೈಗೆ ರಾಹುಲ್ ಗಾಂಧಿ ಜಲ್ಲಿಕಟ್ಟು ವೀಕ್ಷಿಸಲು ಬಂದಿದ್ದರು. ನೆಲದಲ್ಲಿ ಕುಳಿತು ಕೆಲವು ಯುವಕರೊಂದಿಗೆ ಊಟ ಮಾಡಿದ್ದರು. ಅಲ್ಲಿ ಜನರೊಂದಿಗೆ ಸಾಮಾನ್ಯನಂತೆ ಆತ್ಮೀಯವಾಗಿ ಬೆರೆತರು. ಅಲ್ಲಿಂದ ನೇರವಾಗಿ ವಿಲೇಜ್ ಕುಕ್ಕಿಂಗ್ ಯೂಟ್ಯೂಬ್ ಚಾನೆಲ್ ಮಾಡುವವರಲ್ಲಿಗೆ ಹೋಗಿ ಬಿರಿಯಾನಿ ಮಾಡುವುದನ್ನು ನೋಡಿ ಸಲಾಡ್ ಬೆರೆಸಲು ಸಹಾಯ ಮಾಡಿ ಅವರೊಂದಿಗೆ ಕುಳಿತು ಬಿರಿಯಾನಿ ಸವಿದರು. ಇದನ್ನು ಯೂಟ್ಯೂಬ್ ನಲ್ಲಿ ಕೋಟಿಗಟ್ಟಲೆ ಜನರು ವೀಕ್ಷಿಸಿದ್ದರು. ಸುತ್ತಮುತ್ತಲಿನ ಗ್ರಾಮಸ್ಥರು ರಾಹುಲ್ ಗಾಂಧಿ ಬಗ್ಗೆ ಮಾತನಾಡತೊಡಗಿದರು.

ಕೆಲ ದಿನಗಳ ಹಿಂದೆ ಕನ್ಯಾಕುಮಾರಿಗೆ ಹೋಗಿ ಅಲ್ಲಿಂದ ಕಾಲೇಜೊಂದರಲ್ಲಿ ವಿದ್ಯಾರ್ಥಿನಿ ಮುಂದೆ ಸವಾಲು ಹಾಕಿ ಪುಶ್ ಅಪ್ಸ್ ಮಾಡಿದ್ದರು. ವಿದ್ಯಾರ್ಥಿನಿಯರೊಂದಿಗೆ ಡ್ಯಾನ್ಸ್ ಮಾಡಿದ್ದರು. ಟೀ ಸ್ಟಾಲ್ ಗೆ ಹೋಗಿ ಟೀ ಕುಡಿಯುತ್ತಾ ಅವರ ಕಷ್ಟ ಸುಖ ಆಲಿಸುತ್ತಿದ್ದರು, ಬೆಂಗಾವಲು ಪಡೆಯನ್ನು ಲೆಕ್ಕಿಸದೆ ಮುನ್ನುಗ್ಗಿ ಜನರ ಜೊತೆ ಬೆರೆಯುವುದು ತಮಿಳು ನಾಡಿನ ಪಕ್ಷದ ನಾಯಕರಿಗೆ ರಾಹುಲ್ ಗಾಂಧಿ ಅಚ್ಚುಮೆಚ್ಚಾಗಿದ್ದಾರೆ. ರಾಹುಲ್ ಗಾಂಧಿ ಹೊರಗಿನವರಲ್ಲ, ನಮ್ಮವರೇ ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೂಡುವಂತೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. 

ರಾಹುಲ್ ಗಾಂಧಿಯವರ ಈ ನಡೆ ಮತಗಳಾಗಿ ಪರಿವರ್ತನೆಯಾಗುತ್ತದೆಯೇ ಇಲ್ಲವೇ ಎಂದು ಗೊತ್ತಿಲ್ಲ, ಆದರೆ ಅವರು ಹಲವರ ಹೃದಯ ಕದ್ದಿದ್ದಂತೂ ಸುಳ್ಳಲ್ಲ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp