'ಪಕ್ಷಪಾತಿ' ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ರನ್ನು ತೆಗೆದುಹಾಕಿ: ಟಿಎಂಸಿ ಆಗ್ರಹ

ಪಕ್ಷಪಾತ ಮಾಡುವ ರಾಜ್ಯದ ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ಅವರನ್ನು ತೆಗೆದುಹಾಕುವಂತೆ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಗುರುವಾರ ಒತ್ತಾಯಿಸಿದ್ದು,

Published: 04th March 2021 07:42 PM  |   Last Updated: 04th March 2021 07:42 PM   |  A+A-


Sougata

ಸಂಸದ ಸೌಗತ್ ರಾಯ್

Posted By : Lingaraj Badiger
Source : PTI

ಕೋಲ್ಕತಾ: ಪಕ್ಷಪಾತ ಮಾಡುವ ರಾಜ್ಯದ ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ಅವರನ್ನು ತೆಗೆದುಹಾಕುವಂತೆ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಗುರುವಾರ ಒತ್ತಾಯಿಸಿದ್ದು, ಉಪ ಚುನಾವಣಾ ಆಯುಕ್ತರು ಒಕ್ಕೂಟ ರಚನೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ.

ಸುದೀಪ್ ಜೈನ್ ಅವರು 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷಪಾತ ಧೋರಣೆ ಹೊಂದಿದ್ದ "ಹಿನ್ನಲೆ" ಇದ್ದು. ಅವರನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಟಿಎಂಸಿ ಮುಖಂಡ ಡೆರೆಕ್ ಒ 'ಬ್ರಿಯಾನ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಟಿಎಂಸಿ ವಕ್ತಾರ ಸೌಗತ್ ರಾಯ್ ಹೇಳಿದ್ದಾರೆ.

"ಕಳೆದ ಲೋಕಸಭೆ ಚುನಾವಣೆ ವೇಳೆ ಸುದೀಪ್ ಜೈನ್ ಅವರು ಚುನಾವಣಾ ಆಯೋಗದ ಮಾನದಂಡಗಳಿಗೆ ವಿರುದ್ಧವಾಗಿ ಮಾತ್ರವಲ್ಲದೆ ಒಕ್ಕೂಟ ರಚನೆಯ ವಿರುದ್ಧವೂ ಹಲವು ಕ್ರಮಗಳನ್ನು ಕೈಗೊಂಡಿದ್ದರು. ಹೀಗಾಗಿ ಅವರ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಟಿಎಂಸಿ ತಿಳಿಸಿದೆ.

"ಮುಕ್ತ ಮತ್ತು ನ್ಯಾಯಯುತ ಚುನಾವಣೆಗಾಗಿ ಕಾರಣಕ್ಕಾಗಿ ಪಶ್ಚಿಮ ಬಂಗಾಳ ಚುನಾವಣಾ ಉಸ್ತುವಾರಿ ಸ್ಥಾನದಿಂದ ಜೈನ್ ಅವರನ್ನು ತೆಗೆದುಹಾಕಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp