
ಸಾಂದರ್ಭಿಕ ಚಿತ್ರ
ಮುಂಬಯಿ: ನಗರದ ಎಸ್ ವಿ ರಸ್ತೆಯಲ್ಲಿರುವ ರಾಧಾಕೃಷ್ಣ ರೆಸ್ಟೋರೆಂಟ್ ನ 10 ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಕಳೆದ ಎರಡು ದಿನಗಳಿಂದ ಹೋಟೆಲ್ ಮುಚ್ಚಲಾಗಿದೆ.
35 ಸಿಬ್ಬಂದಿಯಿರುವ ಈ ರೆಸ್ಟೋರೆಂಟ್ ನ 10 ಮಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಹೊಟೇಲ್ ಬಂದ್ ಮಾಡಿದ್ದೇವೆ ಎಂದು ಮುಂಬಯಿ ಮಹಾನಗರ ಪಾಲಿಕೆ ಅಧಿಕಾರಿ ತಿಳಿಸಿದ್ದಾರೆ.
ಇಡೀ ರೆಸ್ಟೋರೆಂಟ್ ಗೆ ಸ್ಯಾನಿಟೈಸ್ ಮಾಡಿದ ನಂತರ ಹೊಸ ಸಿಬ್ಬಂದಿ ನಿಯೋಜಿಸಿದರೇ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಇನ್ನೂ ಕೊರೋನಾ ಸೋಂಕಿತ ಸಿಬ್ಬಂದಿಯನ್ನು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಗೆ ಶಿಫ್ಟ್ ಮಾಡಲಾಗಿದೆ.