10,12 ನೇ ತರಗತಿಯ ಕೆಲ ವಿಷಯಗಳ ಪರೀಕ್ಷಾ ವೇಳಾಪಟ್ಟಿ ಪರಿಷ್ಕರಿಸಿದ ಸಿಬಿಎಸ್ ಇ!

 ಹತ್ತು ಮತ್ತು ಹನ್ನೇರಡನೆ ತರಗತಿಗಾಗಿ ಗಣಿತ, ವಾಣಿಜ್ಯ ಮತ್ತು ಭೌತಶಾಸ್ತ್ರ ಸೇರಿದಂತೆ ಕೆಲವು ವಿಷಯಗಳ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿಯನ್ನು ಸಿಬಿಎಸ್ಇ ಶುಕ್ರವಾರ ಪರಿಷ್ಕರಿಸಿದೆ. 10ನೇ ತರಗತಿಯ ವಿಜ್ಞಾನ ಪರೀಕ್ಷೆ ಮೇ 21ಕ್ಕೆ ಮುಂದೂಡಲ್ಪಟ್ಟಿದೆ. ಈ ಹಿಂದೆ ಮೇ 15ಕ್ಕೆ ನಿಗದಿಪಡಿಸಲಾಗಿತ್ತು.

Published: 05th March 2021 11:39 PM  |   Last Updated: 05th March 2021 11:39 PM   |  A+A-


CasualImages1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ನವದೆಹಲಿ: ಹತ್ತು ಮತ್ತು ಹನ್ನೇರಡನೆ ತರಗತಿಗಾಗಿ ಗಣಿತ, ವಾಣಿಜ್ಯ ಮತ್ತು ಭೌತಶಾಸ್ತ್ರ ಸೇರಿದಂತೆ ಕೆಲವು ವಿಷಯಗಳ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿಯನ್ನು ಸಿಬಿಎಸ್ಇ ಶುಕ್ರವಾರ ಪರಿಷ್ಕರಿಸಿದೆ. 10ನೇ ತರಗತಿಯ ವಿಜ್ಞಾನ ಪರೀಕ್ಷೆ ಮೇ 21ಕ್ಕೆ ಮುಂದೂಡಲ್ಪಟ್ಟಿದೆ. ಈ ಹಿಂದೆ ಮೇ 15ಕ್ಕೆ ನಿಗದಿಪಡಿಸಲಾಗಿತ್ತು.

ಮೇ 21ಕ್ಕೆ ನಿಗದಿಯಾಗಿದ್ದ ಗಣಿತ ವಿಷಯದ ಪರೀಕ್ಷೆ ಇದೀಗ ಜೂನ್ 2 ರಂದು ನಡೆಯಲಿದೆ ಎಂದು ಸಿಬಿಎಸ್ ಇ ತಿಳಿಸಿದೆ. ಮೇ 13ಕ್ಕೆ ನಿಗದಿಯಾಗಿದ್ದ 12ನೇ ತರಗತಿಯ ಭೌತಶಾಸ್ತ್ರ ಪರೀಕ್ಷೆ, ಇದೀಗ ಜೂನ್ 8 ರಂದು ನಡೆಯಲಿದೆ.

ಈ ಮೊದಲು ಜೂನ್ 1 ರಂದು ನಿಗದಿಯಾಗಿದ್ದ ಗಣಿತ ಮತ್ತು ಅನ್ವಯಿಕ ಗಣಿತದ ಪರೀಕ್ಷೆಗಳನ್ನು ಇದೀಗ ಮೇ 31 ರಂದು 12 ನೇ ತರಗತಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಗೆ ನಡೆಸಲಾಗುವುದು ಎಂದು ಸಿಬಿಎಸ್ ಇ ತಿಳಿಸಿದೆ. ಜೂನ್ 2 ರಂದು ನಿಗದಿಯಾಗಿದ್ದ ಭೂಗೋಳ ಪರೀಕ್ಷೆ, ಇದೀಗ ಜೂನ್ 3 ರಂದು ನಡೆಯಲಿದೆ. 

ಹತ್ತು ಮತ್ತು 12ನೇ ತರಗತಿಯ ಪರೀಕ್ಷೆಗಳು ಮೇ 4 ರಂದು ಆರಂಭವಾಗಲಿದ್ದು, ಜೂನ್ 10 ರಂದು ಮುಕ್ತಾಯಗೊಳ್ಳಲಿವೆ.
ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದು, ಫೆಬ್ರವರಿಯಲ್ಲಿ ಲಿಖಿತ ಪರೀಕ್ಷೆ ಆರಂಭವಾಗಿ ಮಾರ್ಚ್ ತಿಂಗಳಲ್ಲಿ ಮುಕ್ತಾಯವಾಗುತ್ತಿದ್ದವು. ಆದಾಗ್ಯೂ, ಕೋವಿಡ್ -19 ಸಾಂಕ್ರಾಮಿಕದ ಕಾರಣ ಪರೀಕ್ಷೆ ವಿಳಂಬವಾಗಿತ್ತು. 

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp