ಸತತ 2 ನೇ ದಿನವೂ ದುಬೈ ನಿಂದ ಬೆಂಗಳೂರಿಗೆ ಚಿನ್ನ ಕಳ್ಳಸಾಗಣೆ, ಚಿನ್ನದ ಸ್ಕ್ರೂಗಳು ಪತ್ತೆ!

ಸತತ 2 ನೇ ದಿನವೂ ದುಬೈ ನಿಂದ ಬೆಂಗಳೂರಿಗೆ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗಿದೆ. 

Published: 05th March 2021 03:28 PM  |   Last Updated: 05th March 2021 07:13 PM   |  A+A-


For the second day in a row, Dubai flyer smuggles in gold-coated screws and rods at Bengaluru Airport

ಸತತ 2 ನೇ ದಿನವೂ ದುಬೈ ನಿಂದ ಬೆಂಗಳೂರಿಗೆ ಚಿನ್ನ ಕಳ್ಳಸಾಗಣೆ

Posted By : Srinivas Rao BV
Source : The New Indian Express

ಬೆಂಗಳೂರು: ಸತತ 2 ನೇ ದಿನವೂ ದುಬೈ ನಿಂದ ಬೆಂಗಳೂರಿಗೆ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಲದ ವ್ಯಕ್ತಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಡ್ ಗಳು ಹಾಗೂ ಸ್ಕ್ರ್ಯೂ ಗಳನ್ನು ಬಳಕೆ ಮಾಡಿ 5 ಲಕ್ಷ ರೂಪಾಯಿ ಮೌಲ್ಯದ 150.5 ಗ್ರಾಮ್ ಗಳಷ್ಟು ಚಿನ್ನವನ್ನು ಕಳ್ಳಸಾಗಣೆ ಮಾಡಲಾಗಿದೆ. 

ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿ ದುಬೈ ನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ (AI 1246) ದಲ್ಲಿ ಮಧ್ಯಾಹ್ನ 3.45ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ.
 
ಹ್ಯಾಂಡ್ ಬ್ಯಾಗೇಜ್ ಹಾಗೂ ಚೆಕ್-ಇನ್ ಲಗೇಜ್ ಗಳಲ್ಲಿ ಚಿನ್ನ ಕಳ್ಳಸಾಗಣೆಯಾಗುತ್ತಿದ್ದದ್ದು ಪತ್ತೆಯಾಗಿದ್ದು, ಎರಡು ಚಿನ್ನದ ಉಂಗುರಗಳಿಗೆ ತಾಮ್ರ ಹಾಗೂ ಬೆಳ್ಳಿಯ ಪದರದಲ್ಲಿ ಮುಚ್ಚಲಾಗಿತ್ತು. ಹಾಗೂ ಸಣ್ಣ ಪ್ರಮಾಣದ ಲೋಹದ ಹೊದಿಕೆಯನ್ನು ಲ್ಯಾಪ್ ಟಾಪ್ ಒಳಗೆ ಇಟ್ಟು ಚಿನ್ನದ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಮಂಗಳವಾರದಂದು ದುಬೈ ನಿಂದ ಬಂದಿದ್ದ  ಮತ್ತೋರ್ವ  ಪ್ರಯಾಣಿಕನಿಂದ ಇದೇ ಮಾದರಿಯಲ್ಲಿ ಕಳ್ಳಸಾಗಣೆಯಾಗುತ್ತಿದ್ದ 17.14 ಲಕ್ಷ ರೂಪಾಯಿ ಮೌಲ್ಯದ 360.13 ಗ್ರಾಮ್ ಗಳಷ್ಟು ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp