ರಾಜಕಾರಣಕ್ಕೆ ನಿವೃತ್ತಿ ಘೋಷಣೆ: ಎಐಡಿಎಂಕೆ ನಾಯಕತ್ವ ವಿರುದ್ಧ ಶಶಿಕಲಾ ಕಾನೂನು ಹೋರಾಟ ಹಿಂಪಡೆಯುತ್ತಾರೆಯೇ?

ಎಐಎಡಿಎಂಕೆ ನಾಯಕತ್ವವನ್ನು ಪ್ರಶ್ನಿಸಿ ತಾವು ಸಲ್ಲಿಸಿರುವ ಕೇಸನ್ನು ಮುಂದುವರಿಸುವ ಆಸಕ್ತಿಯಲ್ಲಿ ವಿ ಕೆ ಶಶಿಕಲಾ ಅವರು ಇದ್ದಂತೆ ಕಾಣುತ್ತಿಲ್ಲ.

Published: 05th March 2021 12:28 PM  |   Last Updated: 05th March 2021 12:40 PM   |  A+A-


Expelled AIADMK leader VK Sasikala being feliciated on her return, after serving a jail term in a disproportionate assets case, in Krishnagiri district

ಜೈಲುವಾಸ ಮುಗಿಸಿ ತವರಿಗೆ ಬಂದ ವಿ ಕೆ ಶಶಿಕಲಾಗೆ ಅವರ ಅಭಿಮಾನಿಗಳಿಂದ ಸನ್ಮಾನ

Posted By : Sumana Upadhyaya
Source : The New Indian Express

ಚೆನ್ನೈ: ಎಐಎಡಿಎಂಕೆ ನಾಯಕತ್ವವನ್ನು ಪ್ರಶ್ನಿಸಿ ತಾವು ಸಲ್ಲಿಸಿರುವ ಕೇಸನ್ನು ಮುಂದುವರಿಸುವ ಆಸಕ್ತಿಯಲ್ಲಿ ವಿ ಕೆ ಶಶಿಕಲಾ ಅವರು ಇದ್ದಂತೆ ಕಾಣುತ್ತಿಲ್ಲ.

ಈ ಕೇಸು ಚೆನ್ನೈ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಕೇಸು ವಿಚಾರಣೆ ಬಾಕಿಯಿದ್ದು ತೀರಾ ಇತ್ತೀಚೆಗಷ್ಟೆ ಶಶಿಕಲಾ ಅವರು ಅರ್ಜಿ ವಿಚಾರಣೆಯನ್ನು ತ್ವರಿತಗೊಳಿಸಿ ಎಂದು ಮನವಿ ಸಲ್ಲಿಸಿದ್ದರು. 2017ರ ಸೆಪ್ಟೆಂಬರ್ ನಲ್ಲಿ ಎಐಎಡಿಎಂಕೆ ಸಾಮಾನ್ಯ ಮಂಡಳಿ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಧಾರವನ್ನು ಪ್ರಸ್ನಿಸಿ ಶಶಿಕಲಾ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಮುಂದಿನ ವಿಚಾರಣೆ ಇದೇ 15ರಂದು ನಡೆಯಲಿದೆ.

ಇದೀಗ ಶಶಿಕಲಾ ಅವರ ಆಪ್ತರು ಹೇಳುವ ಪ್ರಕಾರ, ತಾವು ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದೇನೆಂದು ಘೋಷಿಸಿದ್ದು ಹೀಗಾಗಿ ಅರ್ಜಿಯ ವಿಚಾರಣೆ ಬಗ್ಗೆ ಆಸಕ್ತಿ ತೋರಿಸುವಂತೆ ಕಾಣುತ್ತಿಲ್ಲ, ಈ ಬಗ್ಗೆ ಅವರು ಬಹಿರಂಗವಾಗಿ ಹೇಳಿಕೆ ನೀಡಬೇಕಷ್ಟೆ ಎಂದಿದ್ದಾರೆ.

ಆದರೆ ಶಶಿಕಲಾ ಅವರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಹಾಕಿರುವ ಅರ್ಜಿಯನ್ನು ಅಧಿಕೃತವಾಗಿ ಹಿಂತೆಗೆದುಕೊಂಡರಷ್ಟೇ ರಾಜಕೀಯನಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಅವರು ಕೊಟ್ಟಿರುವ ಹೇಳಿಕೆಗೆ ಅರ್ಥಬರುತ್ತದೆ. ಶಶಿಕಲಾ ಅವರು 2017ರಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ, ಒ ಪನ್ನೀರ್ ಸೆಲ್ವಂ, ದಿಂಡಿಗುಲ್ ಸಿ ಶ್ರೀನಿವಾಸನ್, ಎಸ್ ಸೆಮ್ಮಲೈ ಮತ್ತು ಇ ಮದುಸೂದನನ್ ಅವರನ್ನು ಎಐಎಡಿಎಂಕೆ ಸದಸ್ಯರಲ್ಲ ಎಂದು ಘೋಷಿಸಬೇಕೆಂದು ಒತ್ತಾಯಿಸಿದ್ದರು. ಅವರು ಪಕ್ಷದ ಪದಾಧಿಕಾರಿಗಳೆಂದು ತೆಗೆದುಕೊಂಡಿರುವ ಎಲ್ಲಾ ತೀರ್ಮಾನಗಳು ಅಕ್ರಮವಾಗಿದ್ದು ಎಐಎಡಿಎಂಕೆಯ ಬೈಲಾಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ರಾಜಕೀಯ ನಿವೃತ್ತಿಯಾಗುತ್ತೇನೆಂದು ಶಶಿಕಲಾ ಅವರು ಘೋಷಿಸಿದ್ದು ತಮಿಳು ನಾಡು ರಾಜಕೀಯದಲ್ಲಿ ಸದ್ಯ ಬಹುಚರ್ಚಿತ ವಿಷಯವಾಗಿದೆ. ಕೆಲವರು ಇದನ್ನು ವಿಧಾನಸಭಾ ಚುನಾವಣೆಗೆ ಮುಂದಿರುವ ಚಾಣಾಕ್ಷ ನಡೆ ಎಂದು ಕರೆದರೆ, ಇತರರು ಟಿಟಿವಿ ದಿನಕರನ್ ಅವರನ್ನು ಈ ಬೆಳವಣಿಗೆಗೆ ದೂಷಿಸುತ್ತಾರೆ.

ಈ ಮಧ್ಯೆ, ಶಶಿಕಲಾ ಅವರ ಕಿರಿಯ ಸಹೋದರ ದಿವಕರನ್ ಅವರು ಶಶಿಕಲಾ ಅವರ ಪ್ರಸ್ತುತ ನಿರ್ಧಾರಕ್ಕೆ ದಿನಕರನ್ ಅವರನ್ನು ದೂಷಿಸುತ್ತಾರೆ. ದಿನಕರನ್ ಏಕಪಕ್ಷೀಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಶಶಿಕಲಾ ಅವರು ದಿನಕರನ್ ಅವರ ಸಲಹೆಯಂತೆ ನಡೆದುಕೊಳ್ಳುತ್ತಿದ್ದರು. ಈಗ ಅವರು ಶಶಿಕಲಾ ಅವರ ಬಗ್ಗೆ ನಿರ್ಧಾರ ಕೈಗೊಂಡು ರಾಜಕೀಯದಿಂದ ನಿವೃತ್ತರಾಗುವಂತೆ ಮಾಡಿದ್ದಾರೆ. ಶಶಿಕಲಾ ಅವರು ಎಐಎಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ , ದಿನಕರನ್ ಅವರು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೆಮ್ಮೆ ಪಟ್ಟುಕೊಳ್ಳಲು ಪ್ರಾರಂಭಿಸಿದರು ಮತ್ತು ಎಐಎಡಿಎಂಕೆ ಅನ್ನು ಎಎಂಎಂಕೆ ಜೊತೆ ವಿಲೀನಗೊಳಿಸಲು ಸಿದ್ಧರಾಗಿದ್ದಾರೆ. ಶಶಿಕಲಾ ಸ್ಥಾನವನ್ನು ವಶಪಡಿಸಿಕೊಳ್ಳಲು ದಿನಕರನ್ ಅವರ ದೀರ್ಘಕಾಲದ ಯೋಜನೆಯಾಗಿದೆ ಮತ್ತು ಈಗ ಅವರು ಅದನ್ನು ಸಾಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp