
ಸಾಂದರ್ಭಿಕ ಚಿತ್ರ
ನವದೆಹಲಿ: ಛತ್ತೀಸ್ ಗಢದ ನಕ್ಸಲ್ ಪೀಡಿತ ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರ ಐಇಡಿ ಸ್ಫೋಟಗೊಂಡು ಐಟಿಬಿಪಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಿಲ್ಲೆಯ ಕೊಹ್ಕಮೆಟಾ ಪ್ರದೇಶದಲ್ಲಿ ಮಾವೋವಾದಿಗಳು ನಡೆಸಿದ ಐಇಡಿ ಸ್ಫೋಟದಿಂದ ಐಟಿಬಿಪಿ 53ನೇ ಬೆಟಾಲಿಯನ್ ನ ಹೆಡ್ ಕಾನ್ಸ್ ಟೇಬಲ್ ರಾಮ್ಟರ್ ಮಂಗೇಶ್ ಮೃತಪಟ್ಟಿದ್ದಾರೆ.
ಸಂಜೆ 5 ಗಂಟೆ ಸುಮಾರಿನಲ್ಲಿ ಇಡೋ- ಟಿಬೆಟಿಯನ್ ಬಾರ್ಡರ್ ಪೊಲೀಸರ ತಂಡ ಕಾರ್ಯಾಚರಣೆಗಾಗಿ ಬಂದಾಗ ಈ ಘಟನೆ ನಡೆದಿದೆ. ಹುತಾತ್ಮ ಯೋಧ ಮಹಾರಾಷ್ಟ್ರದ ನಾಗ್ಪುರದವರು ಎಂದು ಅವರು ತಿಳಿಸಿದ್ದಾರೆ.
ದಾಂತೇವಾಡ ಜಿಲ್ಲೆಯಲ್ಲಿ ಗುರುವಾರ ನಕ್ಸಲೀಯರು ಐಇಡಿ ಸ್ಫೋಟಗೊಳಿಸಿದ್ದರಿಂದ ಛತ್ತೀಸ್ ಗಡ ಶಸಾಸ್ತ್ರ ಪಡೆಯ ಯೋಧರೊಬ್ಬರು ಹುತಾತ್ಮರಾಗಿದ್ದರು.