ಉತ್ಪಾದನೆ, ಅಭಿವೃದ್ಧಿಗೆ ಉತ್ತೇಜನ: ಕಂಪೆನಿಗಳಿಗೆ ಪ್ರೋತ್ಸಾಹಕ ಯೋಜನೆಗಳನ್ನು ಘೋಷಿಸಿದ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆಗಳನ್ನು ಭಾರತೀಯ ಕಂಪೆನಿಗಳಿಗೆ ಘೋಷಿಸಿದ್ದಾರೆ.

Published: 05th March 2021 11:46 AM  |   Last Updated: 05th March 2021 12:37 PM   |  A+A-


PM Narendra Modi

ಪಿಎಂ ನರೇಂದ್ರ ಮೋದಿ

Posted By : Sumana Upadhyaya
Source : ANI

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆಗಳನ್ನು ಭಾರತೀಯ ಕಂಪೆನಿಗಳಿಗೆ ಘೋಷಿಸಿದ್ದಾರೆ.

ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆ ಕುರಿತ ವೆಬಿನಾರ್ ನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಬಜೆಟ್ ಮತ್ತು ದೇಶದ ನೀತಿಗಳು ಕೇವಲ ಸರ್ಕಾರದ ಪ್ರಕ್ರಿಯೆಗಳಲ್ಲ. ದೇಶದ ಅಭಿವೃದ್ಧಿಯಲ್ಲಿ ಸಂಬಂಧಪಟ್ಟವರೆಲ್ಲರೂ ಇದರಲ್ಲಿ ಪರಿಣಾಮಕಾರಿಯಾಗಿ ಭಾಗಿಯಾಗಬೇಕು ಎಂದು ಒತ್ತಾಯಿಸಿದರು.

ಕೋವಿಡ್-19 ಆರ್ಥಿಕ ಸಂಕಷ್ಟವನ್ನು ಎದುರಿಸಿದ ಕಂಪೆನಿಗಳ ಪುನಶ್ಚೇತನಕ್ಕೆ ಮತ್ತು ಭಾರತದಲ್ಲಿ ಬೃಹತ್ ಕಂಪೆನಿಗಳು ಹೂಡಿಕೆ ಮಾಡಿ ಇಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಈ ಪ್ರೋತ್ಸಾಹಕ ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಇಂದಿನ ವೆಬಿನಾರ್ ಕಾರ್ಯಕ್ರಮದಲ್ಲಿ ಸುಮಾರು 42 ಕಂಪೆನಿಗಳ ಮುಖ್ಯಸ್ಥರು ವರ್ಚುವಲ್ ಸಭೆಯಲ್ಲಿ ಪ್ರಧಾನಿಯವರೊಂದಿಗೆ ಭಾಗಿಯಾಗಿದ್ದಾರೆ. ಕಂಪೆನಿಯ ಮುಖ್ಯಸ್ಥರ ಪ್ರತಿಕ್ರಿಯೆ, ಅಭಿಪ್ರಾಯಗಳನ್ನು ಪಡೆದು ಸರ್ಕಾರದ ಯೋಜನೆಗಳನ್ನು ಜಾರಿಗೆ ಮಾಡಲು ಇಂದಿನ ಸಂವಾದ ಉಪಯೋಗವಾಗಲಿದೆ.

ಇಂದಿನ ವೆಬಿನಾರ್ ನಲ್ಲಿ ಪ್ರಧಾನಿ ಹೇಳಿದ್ದು: ನಮ್ಮ ಸರ್ಕಾರವು ಉತ್ಪಾದನಾ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಲು ನೋಡುತ್ತಿದೆ. ನಮ್ಮ ನೀತಿ ಮತ್ತು ಕಾರ್ಯತಂತ್ರ ಸ್ಪಷ್ಟವಾಗಿದೆ. ನಾವು ಕನಿಷ್ಟ ಸರ್ಕಾರ, ಗರಿಷ್ಠ ಆಡಳಿತದಲ್ಲಿ ನಂಬಿಕೆ ಹೊಂದಿದ್ದೇವೆ. ನಮ್ಮ ನಿರೀಕ್ಷೆ ಶೂನ್ಯ ಪರಿಣಾಮ, ಶೂನ್ಯ ದೋಷ. ನಮ್ಮ ಕಂಪನಿಗಳು ಉತ್ಪಾದನೆಯನ್ನು ಜಾಗತಿಕವಾಗಿಸಿ ಸ್ಪರ್ಧಾತ್ಮಕವಾಗಿಸಲು ದಿನವಿಡೀ ಕೆಲಸ ಮಾಡಬೇಕಾಗುತ್ತದೆ ಎಂದರು.

ಕೋವಿಡ್-19 ಬಂದ ನಂತರ ನಮ್ಮ ಜವಾಬ್ದಾರಿ ಕೇವಲ ಉತ್ಪಾದನೆಯ ವೇಗ ಹೆಚ್ಚಿಸುವುದು ಮಾತ್ರವಲ್ಲದೆ ಪ್ರತಿ ವಲಯದಲ್ಲಿ ಉತ್ಪಾದನಾ ಸುಧಾರಣೆಗಳನ್ನು ಮಾಡಬೇಕಾಗಿದೆ ಎಂದರು.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp