ವಿದೇಶಗಳಿಗೆ ರಫ್ತು ಮಾಡುವುದಕ್ಕೂ ಮೊದಲು ನಮ್ಮ ದೇಶದ ನಾಗರೀಕರಿಗೆ ಲಸಿಕೆ ನೀಡಿ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್

ವಿದೇಶಗಳಿಗೆ ರಫ್ತು ಮಾಡುವುದಕ್ಕೂ ಮುನ್ನ ನಮ್ಮ ದೇಶದ ನಾಗರೀಕರಿಗೆ ಮೊದಲು ಕೊರೋನಾ ಲಸಿಕೆ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಚಾಟಿ ಬೀಸಿದೆ.

Published: 05th March 2021 10:38 AM  |   Last Updated: 05th March 2021 10:38 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ನವದೆಹಲಿ: ವಿದೇಶಗಳಿಗೆ ರಫ್ತು ಮಾಡುವುದಕ್ಕೂ ಮುನ್ನ ನಮ್ಮ ದೇಶದ ನಾಗರೀಕರಿಗೆ ಮೊದಲು ಕೊರೋನಾ ಲಸಿಕೆ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಚಾಟಿ ಬೀಸಿದೆ.

ವಕೀಲರಿಗೂ ಆದ್ಯತೆ ಮೇಲೆ ಲಸಿಕೆ ವಿತರಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ನಾವು ನಮ್ಮ ಲಸಿಕೆ ವಿತರಣೆಯ ಪೂರ್ಣ ಸಾಮರ್ಥ್ಯ ಬಳಸಿಕೊಳ್ಳುತ್ತಿಲ್ಲ. ನಮ್ಮ ಜನರಿಗೆ ಲಸಿಕೆ ನೀಡುವ ಬದಲು ಒಂದೋ ನಾವು ವಿದೇಶಗಳಿಗೆ ದಾನ ಮಾಡುತ್ತಿದ್ದೇವೆ. ಇಲ್ಲವೇ ಮಾರಾಟ ಮಾಡುತ್ತಿದ್ದೇವೆ. ಹೀಗಾಗಿ ಎಲ್ಲೋ ಒಂದು ಕಡೆ ಜವಾಬ್ದಾರಿ ಮತ್ತು ಅವಸರದ ಅಗತ್ಯ ಕಂಡು ಬರುತ್ತಿದೆ ಎಂದು ಬೇಸರ ಅಭಿಪ್ರಾಯ ವ್ಯಕ್ತಪಡಿಸಿತು.

ಅಲ್ಲದೆ, ಕೋವಿಡ್ ಲಸಿಕೆ ವಿತರಣೆ ವೇಳೆ ನಿರ್ದಿಷ್ಟ ವಯೋಮಿತಿ ಮತ್ತು ಕೆಲವು ನಿಬಂಧನೆಗಳಿಗೆ ಒಳಪಟ್ಟವರಿಗೆ ಮಾತ್ರವೇ ಲಸಿಕೆ ವಿತರಣೆಯ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದೆ.

ಇದೇ ವೇಳೆ ನಿಮ್ಮದೈನಂದಿನ/ವಾರ/ಮಾಸಿಕ ಲಸಿಕಾ ಉತ್ಪಾದನಾ ಸಾಮರ್ಥ್ಯ ಎಷ್ಟು? ಈಗ ಉತ್ಪಾದಿಸಿರುವ ಪ್ರಮಾಣ/ ಸಂಗ್ರಹದಲ್ಲಿರುವ ಲಸಿಕೆಯ ಪ್ರಮಾಣ/ ಲಸಿಕೆ ಉತ್ಪಾದನೆಯನ್ನು ಇನ್ನು ಎಷ್ಟು ಪ್ರಮಾಣದಲ್ಲಿ ಹೆಚ್ಚಿಸಬಹುದು ಎಂಬುದರ ಮಾಹಿತಿ ನೀಡಿ ಎಂದು ಪುಣೆಯ ಸೀರಂ ಇನ್ಸಿಟ್ಯೂಟ್ ಮತ್ತು ಹೈದರಬಾದ್'ನ ಭಾರತ್ ಬಯೋಟೆಕ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.

ಕೇಂದ್ರ ಸರ್ಕಾರ ಮೊದಲ 2 ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ, 3ನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ವಿತರಿಸುವ ಯೋಜನೆ ರೂಪಿಸಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp