ತಮಿಳು ನಾಡು ವಿಧಾನಸಭೆ ಚುನಾವಣೆ: ಎಡಿಎಂಕೆ-ಬಿಜೆಪಿ ನಡುವೆ ಸೀಟು ಹಂಚಿಕೆ ಪ್ರಕ್ರಿಯೆ ಅಂತ್ಯ, 20 ಕ್ಷೇತ್ರಗಳಲ್ಲಿ 'ಕೇಸರಿ ಪಕ್ಷ' ಸ್ಪರ್ಧೆ!

ತಮಿಳು ನಾಡು ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ದೀರ್ಘ ಚರ್ಚೆಯ ನಂತರ 20 ಕ್ಷೇತ್ರಗಳನ್ನು ಎಐಎಡಿಎಂಕೆ ಬಿಜೆಪಿಗೆ ಹಂಚಿಕೆ ಮಾಡಿದೆ. ಕನ್ಯಾಕುಮಾರಿ ಸಂಸದೀಯ ಕ್ಷೇತ್ರವನ್ನು ಸಹ ಬಿಜೆಪಿಗೆ ಬಿಟ್ಟುಕೊಟ್ಟಿದೆ.

Published: 06th March 2021 12:06 PM  |   Last Updated: 06th March 2021 01:06 PM   |  A+A-


Chief Minister Edappadi K Palaniswami and Union Home Minister Amit Shah.

ಅಮಿತ್ ಶಾ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿ(ಸಂಗ್ರಹ ಚಿತ್ರ)

Posted By : Sumana Upadhyaya
Source : The New Indian Express

ಚೆನ್ನೈ: ತಮಿಳು ನಾಡು ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ದೀರ್ಘ ಚರ್ಚೆಯ ನಂತರ 20 ಕ್ಷೇತ್ರಗಳನ್ನು ಎಐಎಡಿಎಂಕೆ ಬಿಜೆಪಿಗೆ ಹಂಚಿಕೆ ಮಾಡಿದೆ. ಕನ್ಯಾಕುಮಾರಿ ಸಂಸದೀಯ ಕ್ಷೇತ್ರವನ್ನು ಸಹ ಬಿಜೆಪಿಗೆ ಬಿಟ್ಟುಕೊಟ್ಟಿದೆ.

ಈ ಬಗ್ಗೆ ಒಪ್ಪಂದಕ್ಕೆ ನಿನ್ನೆ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಮಿಳು ನಾಡು ಚುನಾವಣೆ ಉಸ್ತುವಾರಿ ಸಿ ಟಿ ರವಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಸಹಿ ಹಾಕಿದ್ದಾರೆ.

ಒಪ್ಪಂದದ ನಕಲನ್ನು ರಾತ್ರಿ 11.43 ರ ಸುಮಾರಿಗೆ ಸುದ್ದಿ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಾಯಿತು. ಮಧ್ಯರಾತ್ರಿಯಲ್ಲಿ ಸಪ್ತಮಿ ತಿಥಿ ಮುಗಿಯುವ ಮುನ್ನವೇ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಸೀಟು ಹಂಚಿಕೆ ಮಾತುಕತೆ ಆರಂಭವಾದ ನಂತರ ಫೆಬ್ರವರಿ 28 ರಿಂದ ಬಿಜೆಪಿ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ನಿರೀಕ್ಷಿಸುತ್ತಿತ್ತು, ಈ ಬಗ್ಗೆ ಸಾಕಷ್ಟು ಚೌಕಾಶಿ ನಡೆಸಿದೆ ಎಂದು ತಿಳಿದುಬಂದಿದೆ.

ಇದಕ್ಕೂ ಮುನ್ನ ಎಡಿಎಂಕೆ ಆರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಕೂಡ ಸೇರಿದ್ದಾರೆ. 234 ವಿಧಾನಸಭಾ ಕ್ಷೇತ್ರಗಳಲ್ಲಿ ಎಡಿಎಂಕೆ 43 ಸೀಟುಗಳನ್ನು ಪಿಎಂಕೆ ಮತ್ತು ಬಿಜೆಪಿಗೆ ಹಂಚಿಕೆ ಮಾಡಿದೆ.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp