ಜಾರ್ಖಂಡ್: ಅಪ್ರಾಪ್ತ ಗರ್ಭಿಣಿ ಹತ್ಯೆ, ಇಬ್ಬರ ಬಂಧನ

17 ವರ್ಷದ ಗರ್ಭಿಣಿ ಹತ್ಯೆ ಮಾಡಿ ಸಮಾಧಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ,

Published: 07th March 2021 12:50 PM  |   Last Updated: 07th March 2021 12:50 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : PTI

ಮೇದಿನಿನಗರ್: 17 ವರ್ಷದ ಗರ್ಭಿಣಿ ಹತ್ಯೆ ಮಾಡಿ ಸಮಾಧಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ,

ಮೃತಳ 18 ವರ್ಷದ ಪ್ರೇಮಿ ಮತ್ತು ಆತನ ಸ್ನೇಹಿತನನ್ನು ಹುಸೇನಾಬಾದ್ ಪೊಲೀಸ್ ಠಾಣೆ ಪ್ರದೇಶದ ಕೊರಿಯಾಡಿ ಗ್ರಾಮದಿಂದ ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಮದುವೆಯಾಗುವಂತೆ ಸಂತ್ರಸ್ತೆ ತನ್ನ ಪ್ರೇಮಿಯನ್ನು ಒತ್ತಾಯಿಸಿದ ಹಿನ್ನೆಲೆಯಲ್ಲಿ ಆತ ಈ ಕೃತ್ ಮಾಡಿದ್ದಾನೆ, ಗರ್ಭಪಾತ ಮಾಡಿಸಲು ನರ್ಸ್ ಒಬ್ಬಳನ್ನು ಆತ ಸಂಪರ್ಕಿಸಿದ್ದ, ಆದರೆ ಆಕೆ 10 ಸಾವಿರ ರು ಬೇಡಿಕೆ ಇಟ್ಟಿದ್ದಳು, ಆ ಹಣವನ್ನು ಹೊಂದಿಸಲು ಸಾಧ್ಯವಾಗದೇ ಕೊಲೆ ಮಾಡಿದ್ದಾನೆ.

ಫೆಬ್ರವರಿ 21 ರಂದು ಆಕೆಯನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ದ ಆತ ಆಕೆಯ ಕತ್ತಪು ಕುಯ್ದು ಕೊಲೆ ಮಾಡಿದ್ದ. ನಂತರ ಸೋನೆ ನದಿಯಬಳಿ ಶವವನ್ನು ಸ್ನೇಹಿತನ ಜೊತೆ ಸೇರಿ ಸಮಾಧಿ ಮಾಡಿದ್ದ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp