ತಮಿಳು ನಾಡು ಚುನಾವಣೆ: ಡಿಎಂಕೆ ಜೊತೆ ಸೀಟು ಹಂಚಿಕೆ ಒಪ್ಪಂದ, 25 ಕ್ಷೇತ್ರಗಳಲ್ಲಿ  ಕಾಂಗ್ರೆಸ್ ಸ್ಪರ್ಧೆ

ಸುಮಾರು 6 ದಿನಗಳ ಕಾಲ ಸೀಟು ಹಂಚಿಕೆ ಕುರಿತು ತೀರ್ಮಾನ ತೆಗೆದುಕೊಳ್ಳಲು ವಿಳಂಬ ಮಾಡಿದ ನಂತರ ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಡಿಎಂಕೆ ಜೊತೆ ಸೀಟು ಹಂಚಿಕೆ ಕುರಿತು ಕೊನೆಗೂ ಭಾನುವಾರ ತೀರ್ಮಾನಕ್ಕೆ ಬಂದಿದೆ. ಡಿಎಂಕೆ ಕಾಂಗ್ರೆಸ್ ಗೆ 25 ಸೀಟುಗಳನ್ನು ಬಿಟ್ಟುಕೊಟ್ಟಿದೆ.

Published: 07th March 2021 01:20 PM  |   Last Updated: 07th March 2021 01:20 PM   |  A+A-


Congress team lead by Dinesh Gundu Rao and AS Alagiri met DMK chief MK Stalin and finalized the seat-sharing deal for the upcoming election in Chennai on Sunday.

ಇಂದು ಚೆನ್ನೈಯಲ್ಲಿ ಏರ್ಪಟ್ಟ ಕಾಂಗ್ರೆಸ್-ಡಿಎಂಕೆ ವಿಧಾನಸಭೆ ಚುನಾವಣೆಯ ಸ್ಪರ್ಧೆಯಲ್ಲಿ ಸೀಟು ಹಂಚಿಕೆ ಒಪ್ಪಂದ

Posted By : Sumana Upadhyaya
Source : The New Indian Express

ಚೆನ್ನೈ: ಸುಮಾರು 6 ದಿನಗಳ ಕಾಲ ಸೀಟು ಹಂಚಿಕೆ ಕುರಿತು ತೀರ್ಮಾನ ತೆಗೆದುಕೊಳ್ಳಲು ವಿಳಂಬ ಮಾಡಿದ ನಂತರ ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಡಿಎಂಕೆ ಜೊತೆ ಸೀಟು ಹಂಚಿಕೆ ಕುರಿತು ಕೊನೆಗೂ ಭಾನುವಾರ ತೀರ್ಮಾನಕ್ಕೆ ಬಂದಿದೆ. ಡಿಎಂಕೆ ಕಾಂಗ್ರೆಸ್ ಗೆ 25 ಸೀಟುಗಳನ್ನು ಬಿಟ್ಟುಕೊಟ್ಟಿದೆ.

ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ಮಾತುಕತೆ ಆರಂಭವಾದಾಗಿನಿಂದ ಕಾಂಗ್ರೆಸ್ 41 ಸೀಟುಗಳಿಗೆ ಬೇಡಿಕೆಯಿಟ್ಟಿತ್ತು. ಆದರೆ ಡಿಎಂಕೆ ಈ ಬಾರಿ ಶೇಕಡಾ 20ರಷ್ಟು ಸೀಟುಗಳನ್ನು ಮಾತ್ರ ಕಾಂಗ್ರೆಸ್ ಗೆ ಬಿಟ್ಟುಕೊಡುವ ಮೂಲಕ 25 ಸ್ಥಾನಗಳು ಸಿಕ್ಕಿವೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 41 ವಿಧಾನಸಭಾ ಸೀಟುಗಳು ಸ್ಪರ್ಧೆಗೆ ಸಿಕ್ಕಿದ್ದವು. ಕಳೆದ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಕಳೆದುಕೊಂಡಿತ್ತು.

ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಹಲವು ಸುತ್ತಿನ ಮಾತುಕತೆ, ಚರ್ಚೆ ನಡೆಸಿದ ಬಳಿಕ ತಮಿಳು ನಾಡು ಕಾಂಗ್ರೆಸ್ ಘಟಕ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಂಡು ಇಂದು 25 ಸ್ಥಾನಗಳನ್ನು ಪಡೆದುಕೊಂಡಿದೆ. ಇನ್ನು ಏಪ್ರಿಲ್ 26ರಂದು ನಡೆಯಲಿರುವ ಕನ್ಯಾಕುಮಾರಿ ಕ್ಷೇತ್ರದ ಲೋಕಸಭಾ ಉಪ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಸ್ಪರ್ಧಿಸಲಿದೆ.

ಬಿಜೆಪಿ ಈಗ ದೇಶದಲ್ಲಿ ಕೊರೋನವೈರಸ್ ಗಿಂತ ದೊಡ್ಡ ರೋಗವಾಗುತ್ತಿದೆ. ಕಾಂಗ್ರೆಸ್ ಬಲವಾದ ನೆಲೆಯನ್ನು ಹೊಂದಿದ್ದ ಪುದುಚೇರಿಯಲ್ಲಿ, ಬಿಜೆಪಿ ಮಧ್ಯೆ ಪ್ರವೇಶಿಸಿ ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ರಚನೆಯನ್ನು ನಾಶಮಾಡಲು ಕಾರಣವಾಯಿತು, ಇದರ ಪರಿಣಾಮವಾಗಿ ಸರ್ಕಾರವನ್ನು ಉರುಳಿಸಲಾಯಿತು. ಇದೇ ಉದ್ದೇಶಕ್ಕಾಗಿ ಕೇಂದ್ರವು ಕಿರಣ್ ಬೇಡಿಯವರನ್ನು ಇಲ್ಲಿಗೆ ಕಳುಹಿಸಿತ್ತು ಎಂದು ರಾಜ್ಯದ ಪಕ್ಷದ ಉಸ್ತುವಾರಿ ದಿನೇಶ್ ಗುಂಡೂರಾವ್ ಮತ್ತು ಕೆ ಎಸ್ ಅಲಗಿರಿ ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಆರೋಪಿಸಿದರು.

ಇಂದು ಚೆನ್ನೈಯ ಡಿಎಂಕೆ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಒಪ್ಪಂದ ನಡೆಯಿತು.

ಬಿಜೆಪಿಗೆ ಗೆಲುವಿಗೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ನಾವು ಡಿಎಂಕೆ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಈ ಮೈತ್ರಿಯಲ್ಲಿರುವುದು ಸರ್ಕಾರಕ್ಕಾಗಿ ಅಲ್ಲ, ಆದರೆ ನಮ್ಮ ಸಿದ್ಧಾಂತವನ್ನು ಜೀವಂತವಾಗಿಡಲು ಎಂದು ದಿನೇಶ್ ಗುಂಡೂರಾವ್ ಹೇಳಿದರು.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp