ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಉದ್ದೇಶ ಒಂದೇ, ಅದನ್ನು ಮುಗಿಸುವುದು: ದಿನೇಶ್ ಗುಂಡೂರಾವ್ 

ತಮಿಳು ನಾಡಿನಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದ ಉಸ್ತುವಾರಿಯನ್ನು ವಹಿಸಿಕೊಂಡವರಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ನಾಯಕ, ಶಾಸಕ ದಿನೇಶ್ ಗುಂಡೂರಾವ್ ಕೂಡ ಒಬ್ಬರು.

Published: 07th March 2021 10:58 AM  |   Last Updated: 07th March 2021 10:58 AM   |  A+A-


Dinesh Gundu Rao

ದಿನೇಶ್ ಗುಂಡೂರಾವ್

Posted By : Sumana Upadhyaya
Source : ANI

ಚೆನ್ನೈ: ತಮಿಳು ನಾಡಿನಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದ ಉಸ್ತುವಾರಿಯನ್ನು ವಹಿಸಿಕೊಂಡವರಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ನಾಯಕ, ಶಾಸಕ ದಿನೇಶ್ ಗುಂಡೂರಾವ್ ಕೂಡ ಒಬ್ಬರು.

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪಕ್ಷಗಳು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿರುತ್ತವೆ. ಇಂದು ಚೆನ್ನೈಯಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರತಿಕ್ರಿಯಿಸಿರುವ ಅವರು, ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ಉದ್ದೇಶವೊಂದೇ ಅದನ್ನು ರಾಜಕೀಯವಾಗಿ ಮುಗಿಸುವುದು. ಎಲ್ಲಾ ವಿರೋಧ ಪಕ್ಷಗಳನ್ನು ನಾಶ ಮಾಡಿ ದೇಶಾದ್ಯಂತ ಒಂದು ಪಕ್ಷ-ಒಬ್ಬ ವ್ಯಕ್ತಿ ಆಳಬೇಕೆಂಬುದು ಅದರ ದುರುದ್ದೇಶವಾಗಿದೆ. ಆದರೆ ಬಿಜೆಪಿಯ ಹುನ್ನಾರ ಫಲಿಸುವುದಿಲ್ಲ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಡಿಎಂಕೆ, ಎಡರಂಗ, ವಿಸಿಕೆ ಮೈತ್ರಿಕೂಟಗಳು ಭರ್ಜರಿ ಗೆಲುವು ಸಾಧಿಸಲಿವೆ ಎಂದರು.

ಇಂದು ಬೆಳಗ್ಗೆ ಚೆನ್ನೈಯಲ್ಲಿರುವ ಡಿಎಂಕೆ ಕೇಂದ್ರ ಕಚೇರಿಗೆ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಸಂಬಂಧ ಚರ್ಚಿಸಲು ಎರಡೂ ಪಕ್ಷಗಳು ಸಭೆ ಸೇರಿವೆ. ಇದಕ್ಕೂ ಮುನ್ನ ಮಾತನಾಡಿದ ತಮಿಳು ನಾಡು ಕಾಂಗ್ರೆಸ್ ಅಧ್ಯಕ್ಷ ಕೆ ಎಸ್ ಅಲಗಿರಿ, ಡಿಎಂಕೆ ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದು, ಕಾಂಗ್ರೆಸ್ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕನ್ಯಾಕುಮಾರಿ ಲೋಕಸಭಾ ಉಪ ಚುನಾವಣೆಯ ಸಂಬಂಧ ಕೂಡ ಇಂದಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದರು.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp