ಕರುಳು ಕಿವುಚುವ ದೃಶ್ಯ: ಹಸುಗೂಸನ್ನು ಕೈಯಲ್ಲಿ ಹಿಡಿದು ಸುಡು ಬಿಸಿಲಿನಲ್ಲಿ ಕರ್ತವ್ಯ ನಿಭಾಸಿದ ಮಹಿಳಾ ಪೊಲೀಸ್, ವಿಡಿಯೋ!
ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ ಹಿನ್ನಲೆಯಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಸುಡು ಬಿಸಿಲಿನಲ್ಲಿ ತಮ್ಮ ಹಸುಗೂಸನ್ನು ಕೈಯಲ್ಲಿ ಹಿಡಿದು ಕರ್ತವ್ಯ ನಿಭಾಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Published: 07th March 2021 09:26 PM | Last Updated: 08th March 2021 01:36 PM | A+A A-

ಪ್ರತ್ಯಕ್ಷ ದೃಶ್ಯ
ಚಂಢಿಗಡ: ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ ಹಿನ್ನಲೆಯಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಸುಡು ಬಿಸಿಲಿನಲ್ಲಿ ತಮ್ಮ ಹಸುಗೂಸನ್ನು ಕೈಯಲ್ಲಿ ಹಿಡಿದು ಕರ್ತವ್ಯ ನಿಭಾಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಟ್ರಾಫಿಕ್ ಮಹಿಳಾ ಪೊಲೀಸ್ ಪೇದೆ ಪ್ರಿಯಾಂಕಾ ಅವರು ತಮ್ಮ ಮಗುವನ್ನು ಹೊತ್ತು, ಸುಡುವ ಬಿಸಿಲಿನಲ್ಲಿ ಕರ್ತವ್ಯ ನಿಭಾಹಿಸಿದ್ದಾರೆ. ಇದನ್ನು ವಾಹನ ಸವಾರರೊಬ್ಬರು ತಮ್ಮ ಮೊಬೈಲ್ ನಲ್ಲಿ ವಿಡಿಯೋವನ್ನು ಚಿತ್ರಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
ಇನ್ನು ನೆಟ್ಟಿಗರು ಪ್ರಿಯಾಂಕಾ ಅವರ ಕರ್ತವ್ಯ ನಿಷ್ಠೆಗೆ ಶಹಬ್ಬಾಸ್ ಹೇಳಿದ್ದಾರೆ. ಅಲ್ಲದೆ ಪ್ರಿಯಾಂಕಾ ಅವರ ಮೇಲೆ ಕನಿಕರ ತೋರದ ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Chandigarh Police Constable Priyanka Controlling the traffic with her baby in her arms at Sector 23-24 Intersection.
— Gagandeep Singh (@Gagan4344) March 5, 2021
Hats off to the Spirit @ssptfcchd pic.twitter.com/UoRGbH5d8q
ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ಪ್ರಿಯಾಂಕಾಗೆ ಮೇಲಾಧಿಕಾರಿಗಳು ಸೂಚಿಸಿದ್ದರು. ಆದರೆ ಪ್ರಿಯಾಂಕ ಮಗುವಿನ ಸಮೇತ 11 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಕೆಲಸದ ವೇಳೆ ಮಗುವನ್ನು ತಂದಿರುವ ವಿಚಾರವಾಗಿ ಮೇಲಾಧಿಕಾರಿಗಳ ಜೊತೆ ವಾಗ್ವಾದ ನಡೆದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
98 year old man sells chana, we praise
— Priyanka Chaturvedi (@priyankac19) March 6, 2021
A traffic constable works with her baby in arms, we appreciate
An IAS brings her 14 day old baby to work, we applaud
Making a virtue of our failings to provide for senior citizens, facilities for working mothers has become an art.Must stop.