ಪರಿವರ್ತನೆ ಬಂಗಾಳದಲ್ಲಿ ಅಲ್ಲ ದೆಹಲಿಯಲ್ಲಿ ಆಗಲಿದೆ: ಪ್ರಧಾನಿ ಮೋದಿಗೆ ಮಮತಾ

ಎಲ್ ಪಿಜಿ ಸಿಲಿಂಡರ್ ದರ ಏರಿಕೆಯನ್ನು ವಿರೋಧಿ ಮಾ.07 ರಂದು ಪಾದಯಾತ್ರೆಯನ್ನು ಕೈಗೊಂಡಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Published: 07th March 2021 06:59 PM  |   Last Updated: 07th March 2021 06:59 PM   |  A+A-


West Bengal Chief Minister Mamata Banerjee. (Photo | PTI)

ಪರಿವರ್ತನೆ ಬಂಗಾಳದಲ್ಲಿ ಅಲ್ಲ ದೆಹಲಿಯಲ್ಲಿ ಆಗಲಿದೆ: ಪ್ರಧಾನಿ ಮೋದಿಗೆ ಮಮತಾ

Posted By : Srinivas Rao BV
Source : The New Indian Express

ಸಿಲಿಗುರಿ: ಎಲ್ ಪಿಜಿ ಸಿಲಿಂಡರ್ ದರ ಏರಿಕೆಯನ್ನು ವಿರೋಧಿ ಮಾ.07 ರಂದು ಪಾದಯಾತ್ರೆಯನ್ನು ಕೈಗೊಂಡಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಸಾವಿರಾರು ಮಂದಿ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಕೈಗೊಂಡ ಮಮತಾ ಬ್ಯಾನರ್ಜಿ, ನಾವು ಆಟಕ್ಕೆ ಸಿದ್ಧವಿದ್ದೇವೆ, ಬಿಜೆಪಿಗರು ಮತಗಳನ್ನು ಖರೀದಿಸಬೇಕೆಂದಿದ್ದರೆ, ಮತದಾರರು ಹಣ ತೆಗೆದುಕೊಳ್ಳಿ ಆದರೆ ಟಿಎಂಸಿ ಗೆ ಮತ ಹಾಕಿ ಎಂದು ಹೇಳಿದ್ದಾರೆ. 

ಪ್ರಧಾನಿ ಮೋದಿ ಅವರ ಇಂದಿನ ಸಾರ್ವಜನಿಕ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ ಪರಿವರ್ತನೆ ದೆಹಲಿಯಲ್ಲಿ ಆಗಲಿದೆ ಬಂಗಾಳದಲ್ಲಿ ಅಲ್ಲ. ಬಂಗಾಳದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ ಎಂದು ಪ್ರಧಾನಿ ಹೇಳಿದ್ದರು. ಆದರೆ ಉತ್ತರ ಪ್ರದೇಶಗಳನ್ನು ನೋಡಿ, ಬಂಗಾಳದಲ್ಲಿ ಮಹಿಳೆಯರಿಗೆ ಭದ್ರತೆ ಇದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಎಲ್ ಪಿಜಿ ಸಿಲಿಂಡರ್ ಗಳು ಶೀಘ್ರವೇ ಜನ ಸಾಮಾನ್ಯನ ಕೈ ಮೀರಿ ಹೋಗುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದು, ನಮ್ಮ ಧ್ವನಿಗಳು ಕೇಳುವಂತಾಗಲು ಪ್ರತಿಭಟನೆ ನಡೆಸಬೇಕೆಂದು ಹೇಳಿದ್ದಾರೆ.
 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp