ದೇಶಕ್ಕೆ 7,500ನೇ ಜನೌಷಧಿ ಕೇಂದ್ರ ಸಮರ್ಪಣೆ, 75 ಆಯುರ್ವೇದ ಔಷಧಿಗಳು ಸಿಗುವಂತೆ ಕ್ರಮ: ಪ್ರಧಾನಿ ನರೇಂದ್ರ ಮೋದಿ
ಕೋವಿಡ್-19 ಲಸಿಕೆ ವಿರುದ್ಧ ಹೋರಾಡಲು ಇಂದು ದೇಶ ಮತ್ತು ಜಗತ್ತಿಗೆ ಸ್ವದೇಶಿ ನಿರ್ಮಿತ ಲಸಿಕೆಯನ್ನು ನಾವು ಒದಗಿಸುತ್ತಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕೆ ಉಚಿತವಾಗಿ ಸಿಗುತ್ತಿದ್ದು ಖಾಸಗಿ ಆಸ್ಪತ್ರೆಗಳಲ್ಲಿ 250 ರೂಪಾಯಿಗೆ ಲಸಿಕೆ ವಿತರಿಸಲಾಗುತ್ತಿದೆ. ಕೋವಿಡ್ ಲಸಿಕೆಯ ಮೊದಲ ಡೋಸ್ ನ್ನು ನಾನು ಸಹ ಪಡೆದಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ
Published: 07th March 2021 11:53 AM | Last Updated: 07th March 2021 09:09 PM | A+A A-

ಜನೌಷಧಿ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ
ನವದೆಹಲಿ: ಕೋವಿಡ್-19 ಲಸಿಕೆ ವಿರುದ್ಧ ಹೋರಾಡಲು ಇಂದು ದೇಶ ಮತ್ತು ಜಗತ್ತಿಗೆ ಸ್ವದೇಶಿ ನಿರ್ಮಿತ ಲಸಿಕೆಯನ್ನು ನಾವು ಒದಗಿಸುತ್ತಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕೆ ಉಚಿತವಾಗಿ ಸಿಗುತ್ತಿದ್ದು ಖಾಸಗಿ ಆಸ್ಪತ್ರೆಗಳಲ್ಲಿ 250 ರೂಪಾಯಿಗೆ ಲಸಿಕೆ ವಿತರಿಸಲಾಗುತ್ತಿದೆ. ಕೋವಿಡ್ ಲಸಿಕೆಯ ಮೊದಲ ಡೋಸ್ ನ್ನು ನಾನು ಸಹ ಪಡೆದಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಇಂದು ಶಿಲ್ಲಾಂಗ್ ನ ನೈಗ್ರಿಮ್ಸ್ (ಈಶಾನ್ಯ ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆ)ನಲ್ಲಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಗುಣಮಟ್ಟದ ಔಷಧಿಯನ್ನು ಕಡಿಮೆ ದರದಲ್ಲಿ ನೀಡುವ 7,500ನೇ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶಾದ್ಯಂತ ಜನೌಷಧಿ ಕೇಂದ್ರಗಳಲ್ಲಿ 75 ಆಯುರ್ವೇದ ಔಷಧಿಗಳು ಲಭ್ಯವಾಗುವಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಜನೌಷಧಿ ಕೇಂದ್ರಗಳಲ್ಲಿ 11 ಕೋಟಿಗೂ ಅಧಿಕ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಮಾರಾಟ ಮಾಡಲಾಗಿದೆ. ಜನೌಷಧ ಜನನಿಯಡಿ ಗರ್ಭಿಣಿಯರಿಗೆ ಪೂರಕ ವಸ್ತುಗಳು ದೊರೆಯುವಂತೆ ಮಾಡಲಾಗಿದೆ. ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಮಹಿಳೆಯರೇ ನಡೆಸಿಕೊಂಡು ಹೋಗುತ್ತಿದ್ದು ಈ ಮೂಲಕ ಮಹಿಳಾ ಸಬಲೀಕರಣ ಕೂಡ ಆಗುತ್ತಿದೆ ಎಂದರು.
ಜನೌಷಧಿ ಪರಿಯೋಜನೆ: ದೇಶಾದ್ಯಂತ ಬಡವರು ಮತ್ತು ಮಧ್ಯಮ ಆದಾಯ ಹೊಂದಿರುವ ಕುಟುಂಬಗಳಿಗೆ ಪಿಎಂ ಜನೌಷಧಿ ಪರಿಯೋಜನೆ ನೀಡಲಾಗುತ್ತಿದ್ದು ಸೇವಾ ಮತ್ತು ಉದ್ಯೋಗಕ್ಕೆ ಈ ಯೋಜನೆ ಮಾಧ್ಯಮವಾಗಿದ್ದು, ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಈ ಯೋಜನೆಯಡಿ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್ ಕಿನ್ಗಳು ಎರಡೂವರೆ ರೂಪಾಯಿಗೆ ಒಂದರಂತೆ ಸಿಗುತ್ತಿದೆ ಎಂದರು.
ಬಡವರಿಗೆ ಮತ್ತು ಮಧ್ಯಮ ವರ್ಗದ ಜನತೆಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗಲು ಆರೋಗ್ಯ ಯೋಜನೆ ಭಾಗವಾಗಿ ಸ್ಟಂಟ್ ಗಳ ಮತ್ತು ಔಷಧಿಗಳ ಬೆಲೆಯನ್ನು ನಮ್ಮ ಸರ್ಕಾರ ಕಡಿಮೆ ಮಾಡಿದೆ, ಇದರಿಂದ 50 ಸಾವಿರ ಕೋಟಿ ರೂಪಾಯಿ ಬಡ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಉಳಿತಾಯವಾಗುತ್ತದೆ ಎಂದು ಸಹ ಪ್ರಧಾನಿ ಹೇಳಿದರು.