ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಪಿಸಿಆರ್ ವ್ಯಾನ್ ನಲ್ಲಿ ಹೆರಿಗೆಯಾದ 9 ಮಹಿಳೆಯರಿಗೆ ದೆಹಲಿ ಪೊಲೀಸರಿಂದ ಸನ್ಮಾನ 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ವಿವಿಧ ಕಡೆಗಳಲ್ಲಿ ವಿವಿಧ ರೀತಿಯಲ್ಲಿ ಆಚರಣೆಗಳು ನಡೆಯುತ್ತಿರುತ್ತದೆ. ಹಲವರು ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡುತ್ತಾರೆ.

Published: 08th March 2021 08:22 AM  |   Last Updated: 08th March 2021 08:22 AM   |  A+A-


Delhi police

ದೆಹಲಿ ಪೊಲೀಸ್ ಘಟಕ

Posted By : Sumana Upadhyaya
Source : ANI

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ವಿವಿಧ ಕಡೆಗಳಲ್ಲಿ ವಿವಿಧ ರೀತಿಯಲ್ಲಿ ಆಚರಣೆಗಳು ನಡೆಯುತ್ತಿರುತ್ತದೆ. ಹಲವರು ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡುತ್ತಾರೆ.

ದೆಹಲಿ ಪೊಲೀಸ್ ವಿಭಾಗದ ಪಿಸಿಆರ್ ವ್ಯಾನ್ ನಲ್ಲಿ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಹೆರಿಗೆಯಾದ 9 ಮಹಿಳೆಯರನ್ನು ಇಂದು ದೆಹಲಿಯ ಪೊಲೀಸ್ ಘಟಕದ ಕೇಂದ್ರ ಕಚೇರಿಯಲ್ಲಿ ದೆಹಲಿ ಪೊಲೀಸ್ ಆಯುಕ್ತರು ಸನ್ಮಾನಿಸಲಿದ್ದಾರೆ.

ಕಳೆದ ವರ್ಷ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ದೆಹಲಿ ಪೊಲೀಸ್ ಪಿಸಿಆರ್ ಘಟಕದ ಸಿಬ್ಬಂದಿ ಸುಮಾರು 997 ಗರ್ಭಿಣಿಯರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಲಾಕ್ ಡೌನ್ ಸಮಯದಲ್ಲಿ ಎಲ್ಲಾ ರೀತಿಯ ಸಾರಿಗೆ ಸಂಚಾರ ಬಂದ್ ಆಗಿದ್ದ ವೇಳೆ ಆಂಬ್ಯುಲೆನ್ಸ್ ಸೇವೆ ಇಲ್ಲದಿದ್ದಾಗ ಪಿಸಿಆರ್ ಎಂಪಿವಿ ಸಿಬ್ಬಂದಿ ಮಹಿಳೆಯರಿಗೆ ಅಸಾಧಾರಣ ಸೇವೆ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಸಿಆರ್ ಡಿಸಿಪಿ ಇಶಾ ಪಾಂಡೆ, ಎಂಪಿವಿಗಳ ಸಿಬ್ಬಂದಿಗಳು ತಮ್ಮ ಶಿಶುಗಳನ್ನು ಪಿಸಿಆರ್ ವ್ಯಾನ್‌ನಲ್ಲಿ ತಲುಪಿಸಲು ಸಹಾಯ ಮಾಡುವ ಮೂಲಕ ಅನುಕರಣೀಯ ಸೇವೆ ಮತ್ತು ಕರ್ತವ್ಯದ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಪಿಸಿಆರ್ ಸೇವೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp