ತಮಿಳುನಾಡು ಚುನಾವಣೆ: ಎಂಐಎಂ ಜತೆ ದಿನಕರನ್ ಎಎಂಎಂಕೆ ಮೈತ್ರಿ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿಟಿವಿ ದಿನಕರನ್ ನೇತೃತ್ವದ ಎಎಂಎಂಕೆ ಸೋಮವಾರ ಅಸದುದ್ದೀನ್ ಒವೈಸಿಯ ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಂಡಿದೆ.

Published: 08th March 2021 07:32 PM  |   Last Updated: 08th March 2021 07:33 PM   |  A+A-


ammk-mim

ಎಎಂಎಂಕೆ - ಎಂಐಎಂ ಮೈತ್ರಿ

Posted By : Lingaraj Badiger
Source : The New Indian Express

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿಟಿವಿ ದಿನಕರನ್ ನೇತೃತ್ವದ ಎಎಂಎಂಕೆ ಸೋಮವಾರ ಅಸದುದ್ದೀನ್ ಒವೈಸಿಯ ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಂಡಿದೆ.

ತಮಿಳುನಾಡಿನ ವನಿಯಾಂಬಾಡಿ, ಕೃಷ್ಣಗಿರಿ ಮತ್ತು ಶಂಕರಪುರಂ ಎಂಬ ಮೂರು ವಿಧಾನಸಭಾ ಕ್ಷೇತ್ರಗಳನ್ನು ಎಐಎಂಐಎಂಗೆ ಹಂಚಿಕೆ ಮಾಡಲಾಗಿದೆ.

ಎಐಎಂಐಎಂ ರಾಜ್ಯಾಧ್ಯಕ್ಷ ಟಿ.ಎಸ್.ವಕೀಲ್ ಅಹ್ಮದ್ ಮತ್ತು ತಮಿಳುನಾಡಿನ ಪಕ್ಷದ ಉಸ್ತುವಾರಿ ಮೊಹಮ್ಮದ್ ರಹಮತುಲ್ಲಾ ತಯ್ಯಾಬ್ ಅವರು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರೊಂದಿಗೆ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದರು.

2019 ರ ಲೋಕಸಭಾ ಚುನಾವಣೆಯಲ್ಲಿ ಎಎಂಎಂಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಜತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ನಂತರ 2020ರ ನವೆಂಬರ್‌ನಲ್ಲಿ ದಿನಕರನ್ ಅವರ ಎಸ್ ಡಿಪಿಐ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದರು.

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp