ದೇಶ ಬಳಲುತ್ತಿದೆ, ಜನ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ; ವಿಪಕ್ಷ ನಾಯಕರ ಆಕ್ಷೇಪ, ಕೋಲಾಹಲ: ರಾಜ್ಯಸಭೆ ಕಲಾಪ ಮುಂದೂಡಿಕೆ

ಸಂಸತ್ತಿನ ಬಜೆಟ್ ಅಧಿವೇಶನದ ಮುಂದುವರಿದ ಭಾಗ ಆರಂಭವಾದ ಸೋಮವಾರ ರಾಜ್ಯಸಭಾ ಕಲಾಪ ತೀವ್ರ ಗದ್ದಲ, ಕೋಲಾಹಲ, ಆರೋಪ-ಪ್ರತ್ಯಾರೋಪಗಳಲ್ಲಿ ಸಾಗಿದ್ದರಿಂದ ರಾಜ್ಯಸಭೆ ಕಲಾಪವನ್ನು ಸಭಾಪತಿಗಳು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.

Published: 08th March 2021 11:23 AM  |   Last Updated: 08th March 2021 12:42 PM   |  A+A-


Rajya Sabha adjourned till 1 pm

ರಾಜ್ಯಸಭೆ ಕಲಾಪ ಮುಂದೂಡಿಕೆ

Posted By : Sumana Upadhyaya
Source : PTI

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಮುಂದುವರಿದ ಭಾಗ ಆರಂಭವಾದ ಸೋಮವಾರ ರಾಜ್ಯಸಭಾ ಕಲಾಪ ತೀವ್ರ ಗದ್ದಲ, ಕೋಲಾಹಲ, ಆರೋಪ-ಪ್ರತ್ಯಾರೋಪಗಳಲ್ಲಿ ಸಾಗಿದ್ದರಿಂದ ರಾಜ್ಯಸಭೆ ಕಲಾಪವನ್ನು ಸಭಾಪತಿಗಳು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.

ಸತತವಾಗಿ ಏರಿಕೆಯಾಗುತ್ತಿರುವ ಇಂಧನ ಬೆಲೆ ಹೆಚ್ಚಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕೆಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸಿದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿಂದು ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿಜೆ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯಬೇಕೆಂದು ನೊಟೀಸ್ ನೀಡಿದರು.

ಆದರೆ ಸೂಕ್ತ ಮಸೂದೆ ಮಂಡನೆಯಾದಾಗ ಈ ಬಗ್ಗೆ ಚರ್ಚೆ ನಡೆಸೋಣ ಈಗ ಬೇಡ ಎಂದು ಸಭಾಪತಿ ವೆಂಕಯ್ಯ ನಾಯ್ಡು ಹೇಳಿದ್ದಕ್ಕೆ ವಿರೋಧ ಪಕ್ಷದ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾ ಘೋಷಣೆಗಳನ್ನು ಕೂಗಿದರು.

ಆದರೂ ಸಭಾಪತಿಗಳು ಬಿಡಲಿಲ್ಲ, ಪ್ರಶ್ನೋತ್ತರ ಅವಧಿ ಮುಂದುವರಿಸಿದರು. ಪ್ರತಿಪಕ್ಷ ನಾಯಕರ ಗದ್ದಲ, ಕೋಲಾಹಲ, ಘೋಷಣೆ ಮುಂದುವರಿಯಿತು.

"ಪ್ರಶ್ನೋತ್ತರ ಅವಧಿಯನ್ನು ನೀವು ಬಯಸದಿದ್ದರೆ, ನೀವು ಜನರನ್ನು ವಂಚಿಸಲು ಬಯಸಿದರೆ, ನಾನು ಸದನವನ್ನು ಮುಂದೂಡುತ್ತೇನೆ. ದಯವಿಟ್ಟು ನಿಮ್ಮ ಆಸನಕ್ಕೆ ಹೋಗಿ ಕುಳಿತುಕೊಳ್ಳಿ, ಪ್ರಜಾಪ್ರಭುತ್ವವನ್ನು ಅಣಕಿಸಬೇಡಿ ಎಂದರು.

ವಿರೋಧ ಪಕ್ಷದ ನಾಯಕರ ಗದ್ದಲ, ಕೋಲಾಹಲ ನಿಲ್ಲದಾಗ ಸಭಾಪತಿಗಳು ಕಲಾಪವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು. 
ಸಂಸತ್ತಿನ ಬಜೆಟ್ ಅಧಿವೇಶನದ ಮುಂದುವರಿದ ಭಾಗ ಇಂದು ಆರಂಭವಾಗಿದ್ದು ಏಪ್ರಿಲ್ 8ಕ್ಕೆ ಮುಕ್ತಾಯಗೊಳ್ಳಲಿದೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp