ಉತ್ತರ ಪ್ರದೇಶ: ಅತ್ಯಾಚಾರ ಆರೋಪಿಯನ್ನು ಹೊಡೆದು ಸಾಯಿಸಿದ ಸ್ಥಳೀಯರು 

ಅತ್ಯಾಚಾರದ ಆರೋಪಿಯನ್ನು ಸ್ಥಳೀಯರೇ ಹೊಡೆದು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಾಚೆಂಡಿಯಲ್ಲಿ ನಡೆದಿದೆ. 

Published: 08th March 2021 01:10 PM  |   Last Updated: 08th March 2021 01:10 PM   |  A+A-


murder

ಸಾಂದರ್ಭಿಕ ಚಿತ್ರ

Posted By : Srinivas Rao BV
Source : IANS

ಕಾನ್ಪುರ: ಅತ್ಯಾಚಾರದ ಆರೋಪಿಯನ್ನು ಸ್ಥಳೀಯರೇ ಹೊಡೆದು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಾಚೆಂಡಿಯಲ್ಲಿ ನಡೆದಿದೆ. 

ಕೃಷಿ ಭೂಮಿಗೆ ತೆರಳಿದ್ದ ಮಹಿಳೆಯ ಮೇಲೆ ಸುಬೋಧ್ ಬಾಜ್ಪೇಯಿ ಎಂಬ ವ್ಯಕ್ತಿ ಅತ್ಯಾಚಾರವೆಸಗಿದ್ದ ಆರೋಪ ಕೇಳಿಬಂದಿತ್ತು. ಮಹಿಳೆ ಹೊಲದಿಂದ ಮನೆಗೆ ಬಂದ ಬೆನ್ನಲ್ಲೇ ಘಟನೆಯನ್ನು ಕುಟುಂಬ ಸದಸ್ಯರ ಬಳಿ ತಿಳಿಸಿದ್ದರು. ಆಕ್ರೋಶಗೊಂಡ ಕುಟುಂಬ ಸದಸ್ಯರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಆ ನಂತರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಚೌಬೇಪುರದ ತಾತ್ಕಾಲಿಕ ಜೈಲಿನಲ್ಲಿರಿಸಿದ್ದರು. ಆದರೆ ಥಳಿತಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಆರೋಪಿ, ಸಾವನ್ನಪ್ಪಿದ್ದಾನೆ. 

ಆರೋಪಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಎಸ್ ಪಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ಮೂಲಕ ಥಳಿತದಿಂದ ವ್ಯಕ್ತಿ ಸಾವನ್ನಪ್ಪಿದ್ದಾನೋ ಇಲ್ಲವೋ ಎಂಬುದು ಖಚಿತವಾಗಲಿದೆ ಎಂದು ಎಸ್ ಪಿ ಹೇಳಿದ್ದಾರೆ. ಸಂತ್ರಸ್ತೆ ಹಾಗೂ ಆರೋಪಿ ಇಬ್ಬರು ಒಂದೇ ಗ್ರಾಮದ ನಿವಾಸಿಗಳಾಗಿದ್ದಾರೆ. ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಆರೋಪಿಯ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp