ಮಹಿಳೆಯರ ಮೇಲೆ ನಮಗೆ ಹೆಚ್ಚಿನ ಗೌರವವಿದೆ: ಟೀಕೆಗಳ ನಡುವೆ ಸುಪ್ರೀಂ ಕೋರ್ಟ್ ಸ್ಪಷ್ಟನೆ

 ಮಹಿಳೆಯರ ಮೇಲೆ ನಮಗೆ ಹೆಚ್ಚಿನ ಗೌರವವಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ಸೋಮವಾರ ಅಭಿಪ್ರಾಯಪಟ್ಟಿದೆ ಮತ್ತು ನ್ಯಾಯಾಂಗದ ಖ್ಯಾತಿಯು ವಕೀಲರ ಕೈಯಲ್ಲಿದೆ ಎಂದು ಹೇಳಿದೆ.

Published: 08th March 2021 02:57 PM  |   Last Updated: 08th March 2021 03:53 PM   |  A+A-


Supreme_Court1

ಸುಪ್ರೀಂಕೋರ್ಟ್

Posted By : Nagaraja AB
Source : The New Indian Express

ನವದೆಹಲಿ: ಮಹಿಳೆಯರ ಮೇಲೆ ನಮಗೆ ಹೆಚ್ಚಿನ ಗೌರವವಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ಸೋಮವಾರ ಅಭಿಪ್ರಾಯಪಟ್ಟಿದೆ ಮತ್ತು ನ್ಯಾಯಾಂಗದ ಖ್ಯಾತಿಯು ಅದರ ವಕೀಲರ ಕೈಯಲ್ಲಿದೆ ಎಂದು ಹೇಳಿದೆ. 

14 ವರ್ಷದ ಗರ್ಭಿಣಿ ಸಂತ್ರಸ್ಥೆಯ ಅರ್ಜಿ ವಿಚಾರಣೆ ಅರ್ಜಿ ನಡೆಸುತ್ತಿರುವ  ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ವಿ ರಾಮಸುಬ್ರಹ್ಮಣಿಯನ್ನು ಅವರನ್ನೊಳಗೊಂಡ ಪೀಠ ಈ ಹೇಳಿಕೆ ನೀಡಿದೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವಸೆಗಿದ ಆರೋಪಿಗೆ ಮದುವೆಯಾಗಲು ಸಿದ್ಧರಿರುವಿರಾ ಎಂದು ಕೇಳಿದ್ದ ಸುಪ್ರೀಂಕೋರ್ಟ್ ಬಗ್ಗೆ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು. ಈ ಟೀಕೆಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಈ ರೀತಿಯಲ್ಲಿ ಸುಪ್ರೀಂಕೋರ್ಟ್ ಪ್ರತಿಕ್ರಿಯೆ ನೀಡಿದೆ.

ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಸಿಪಿಪಿ(ಎಂ) ಪಾಲಿಟ್ ಬ್ಯೂರೊ ಬೃಂದಾ ಕಾರೆಟ್ ಪತ್ರ ಬರೆದಿದ್ದರು. ಮುಖ್ಯ ನ್ಯಾಯಮೂರ್ತಿಗಳ ಕ್ಷಮೆಗೆ ಒತ್ತಾಯಿಸಿ ಅನೇಕ ಮಹಿಳಾ ಪರ ಹೋರಾಟಗಾರರು, ಪ್ರಗತಿಪರ ಚಿಂತಕರು ಬಹಿರಂಗವಾಗಿ ಪತ್ರ ಬರೆದಿದ್ದರು.

ಈ ಹಿಂದಿನ ಪ್ರಕರಣವನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್,  ಮಹಿಳೆಯರ ಮೇಲೆ ನಮಗೆ ಹೆಚ್ಚಿನ ಗೌರವವಿದೆ. ನ್ಯಾಯಾಂಗದ ಖ್ಯಾತಿಯೂ ಯಾವಾಗಲೂ ವಕೀಲರ ಕೈಯಲ್ಲಿದೆ ಎಂದು ಈ ಪ್ರಕರಣದಲ್ಲಿ ಭಾಗಿಯಾದ ವಕೀಲರ ಕುರಿತು ನ್ಯಾಯಾಲಯ ಹೇಳಿತು. 

ದೂರುದಾರರ ಪರ ವಾದಿಸಿದ ವಕೀಲ ವಿಕೆ ಬಿಜು, ಕೆಲ ಜನರು ಸುುಪ್ರೀಂಕೋರ್ಟ್ ವರ್ಚಸ್ಸಿಗೆ ಧಕ್ಕೆ ತರುವಂತೆ ಮಾಡುತ್ತಿದ್ದಾರೆ ಎಂದು ಹೇಳಿತು. ಸುಪ್ರೀಂಕೋರ್ಟ್ ಹೇಳಿಕೆಯನ್ನು ಬೆಂಬಲಿಸಿದ ಬಾರ್  ಕೌನ್ಸಿಲ್ ಇದರಲ್ಲಿ ರಾಜಕೀಯ ಬೆರೆಸದಂತೆ, ಮುಖ್ಯ ನ್ಯಾಯಾಮೂರ್ತಿಗೆ ಪತ್ರ ಬರೆದಿದ್ದ ಹೋರಾಟಗಾರರಿಗೆ ಹೇಳಿತು.

ನಿರೀಕ್ಷಿತಾ ಜಾಮೀನು ರದ್ದುಪಡಿಸಿರುವ ಮುಂಬೈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಟೆಕ್ನಿಶಿಯನ್  ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಾರ್ಚ್ 1 ರಂದು ಬೊಬ್ಡೆ ನೇತೃತ್ವದ ನ್ಯಾಯಪೀಠ ನಡೆಸಿತ್ತು. ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾಗಲು ಸಿದ್ಧವಿರುವಿರಾ ಎಂದು ಆರೋಪಿಯನ್ನು ಕೇಳಿತ್ತು.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp