ಇಂಧನ ಬೆಲೆ ಏರಿಕೆ ಸಂಬಂಧ ವಿಪಕ್ಷಗಳ ಕೋಲಾಹಲ: ಸಂಸತ್ ಅಧಿವೇಶನ ನಾಳೆಗೆ ಮುಂದೂಡಿಕೆ

ಹೆಚ್ಚುತ್ತಿರುವ ಇಂಧನ ಬೆಲೆಗಳ ಬಗ್ಗೆ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಪದೇ ಪದೇ ಕೋಲಾಹಲಎಬ್ಬಿಸಿದ ಹಿನ್ನೆಲೆ ಸಂಸತ್ತಿನ ಅಧಿವೇಶನವನ್ನು ನಾಳೆಗೆ (ಮಾರ್ಚ್10)ಕ್ಕೆ ಮುಂದೂಡಲಾಗಿದೆ.

Published: 09th March 2021 03:19 PM  |   Last Updated: 09th March 2021 05:19 PM   |  A+A-


ಸಂಸತ್ತು

Posted By : Raghavendra Adiga
Source : ANI

ನವದೆಹಲಿ: ಹೆಚ್ಚುತ್ತಿರುವ ಇಂಧನ ಬೆಲೆಗಳ ಬಗ್ಗೆ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಪದೇ ಪದೇ ಕೋಲಾಹಲಎಬ್ಬಿಸಿದ ಹಿನ್ನೆಲೆ ಸಂಸತ್ತಿನ ಅಧಿವೇಶನವನ್ನು ನಾಳೆಗೆ (ಮಾರ್ಚ್ 10ಕ್ಕೆ) ಮುಂದೂಡಲಾಗಿದೆ.

ಉಭಯ ಸದನಗಳನ್ನು ಮುಂದೂಡಲಾಗಿದ್ದು, ನಾಳೆ ಬೆಳಿಗ್ಗೆ 11 ಗಂಟೆಗೆ ಸಭೆ ಸೇರಲಿದೆ.

ಇಂಧನ ಬೆಲೆ ಏರಿಕೆ ಕುರಿತು ಪ್ರತಿಪಕ್ಷಗಳು ನಿರಂತರವಾಗಿ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇಂದು ಸಂಸತ್ತಿನ ಉಭಯ ಸದನಗಳನ್ನು ಮಂಗಳವಾರ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳ ಬಗ್ಗೆ ಪ್ರತಿಪಕ್ಷಗಳು ನಿರಂತರವಾಗಿ ಕೋಲಾಹಲ ನಡೆಸಿದ ಕಾರಣ ಸಂಸತ್ ಅಧಿವೇಶನವನ್ನು ಪದೇ ಪದೇ ಮುಂದೂಡಬೇಕಾಗಿ ಬಂದಿತ್ತು.

ಉಭಯ ಸದನಗಳ ಸಮಯವನ್ನು ಪರಿಷ್ಕರಿಸುವ ನಿರ್ಧಾರವನ್ನು ಸೋಮವಾರ ಪ್ರಕಟಿಸಲಾಯಿತು.ಕೋವಿಡ್ 19 ಪ್ರೇರಿತ ಮಾನದಂಡಗಳ ಮಧ್ಯೆ ರಾಜ್ಯಸಭೆ ಮತ್ತು ಲೋಕಸಭೆ ಎರಡರ ಸಮಯ ಮತ್ತು ಸಾಮಾಜಿಕ ಅಂತರದ ಮಾನದಂಡಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗವು ಸೋಮವಾರದಿಂದ ಎಲ್ಲಾ ಕೋವಿಡ್ 19 ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರಾರಂಭವಾಗಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp