ತಮಿಳುನಾಡು ಚುನಾವಣೆ: ಎಐಎಡಿಎಂಕೆ ನೇತೃತ್ವದ ಮೈತ್ರಿಯಿಂದ ವಿಜಯಕಾಂತ್ ರ ಡಿಎಂಡಿಕೆ ಹೊರಕ್ಕೆ!
ತಮಿಳು ನಟ- ರಾಜಕಾರಣಿ ವಿಜಯ ಕಾಂತ್ ನೇತೃತ್ವದ ಡಿಎಂಡಿಕೆ ಎಐಎಡಿಎಂಕೆ- ಬಿಜೆಪಿ ಮೈತ್ರಿಯನ್ನು ಕಡಿದುಕೊಂಡಿದೆ. ನಿರೀಕ್ಷೆ ಸ್ಥಾನಗಳು ಅಥವಾ ಕ್ಷೇತ್ರಗಳನ್ನು ಹಂಚಿಕೆ ಮಾಡದಿರುವುದೇ ಡಿಎಂಡಿಕೆ ಮೈತ್ರಿಯಿಂದ ಹೊರಬರಲು ಕಾರಣ ಎಂದು ಹೇಳಿದೆ.
Published: 09th March 2021 03:24 PM | Last Updated: 09th March 2021 05:20 PM | A+A A-

ವಿಜಯಕಾಂತ್
ಚೆನ್ನೈ: ತಮಿಳು ನಟ- ರಾಜಕಾರಣಿ ವಿಜಯ ಕಾಂತ್ ನೇತೃತ್ವದ ಡಿಎಂಡಿಕೆ ಎಐಎಡಿಎಂಕೆ- ಬಿಜೆಪಿ ಮೈತ್ರಿಯನ್ನು ಕಡಿದುಕೊಂಡಿದೆ. ನಿರೀಕ್ಷೆ ಸ್ಥಾನಗಳು ಅಥವಾ ಕ್ಷೇತ್ರಗಳನ್ನು ಹಂಚಿಕೆ ಮಾಡದಿರುವುದೇ ಡಿಎಂಡಿಕೆ ಮೈತ್ರಿಯಿಂದ ಹೊರಬರಲು ಕಾರಣ ಎಂದು ಹೇಳಿದೆ.
ಪಕ್ಷದ ಕಚೇರಿಯಲ್ಲಿ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಬಳಿಕ ವಿಜಯಕಾಂತ್ ಈ ಹೇಳಿಕೆಯನ್ನು ನೀಡಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆಯೊಂದಿಗೆ ಮೂರು ಸುತ್ತಿನ ಮಾತುಕತೆ ನಡೆಸಿದ್ದಾಗಿ ಅವರು ಹೇಳಿದ್ದಾರೆ.
ನಿರೀಕ್ಷಿತ ಸ್ಥಾನಗಳು ಮತ್ತು ಕ್ಷೇತ್ರಗಳನ್ನು ಹಂಚಿಕೆ ಮಾಡಲು ಎಐಎಡಿಎಂಕೆ ನಿರಾಕರಿಸಿದ ನಂತರ ಜಿಲ್ಲಾ ಕಾರ್ಯದರ್ಶಿಗಳ ಮಾತುಕತೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಧಾರದಂತೆ ಎಐಎಡಿಎಂಕೆ- ಬಿಜೆಪಿ ಮೈತ್ರಿಯಿಂದ ಹೊರಬಂದಿರುವುದಾಗಿ ಅವರು ತಿಳಿಸಿದ್ದಾರೆ.
ಇಂದು ನಮಗೆಲ್ಲಾ ದೀಪಾವಳಿ ದಿನವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಎಐಎಡಿಎಂಕೆ ತಕ್ಕ ಬೆಲೆ ತೆರಲಿದೆ ಎಂದು ಡಿಎಂಡಿಕೆ ಉಪ ಕಾರ್ಯದರ್ಶಿ ಎಲ್. ಕೆ. ಸುದೀಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಡಿಎಂಡಿಕೆ 41 ಸೀಟುಗಳಿಗೆ ಬೇಡಿಕೆ ಇಟ್ಟಿತ್ತು. ಆದರೆ, ಅಂತಿಮವಾಗಿ 23 ಸೀಟುಗಳನ್ನು ನೀಡಲಾಗಿತ್ತು. ಪಿಎಂಕೆಗೆ 23 ಮತ್ತು ಬಿಜೆಪಿಗೆ 20 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ 39 ಸ್ಥಾನಗಳ ಪೈಕಿ 37ರಲ್ಲಿ ಗೆಲುವು ಸಾಧಿಸಿತ್ತು. ವಿಜಯ ಕಾಂತ್ ಅವರ ಡಿಎಂಡಿಕೆ ಪಕ್ಷ ಒಂದು ಸ್ಥಾನವನ್ನು ಸಹ ಗೆದ್ದಿರಲಿಲ್ಲ.