ಕೆಂಪು ಕೋಟೆ ಹಿಂಸಾಚಾರ: ದೆಹಲಿ ಪೊಲೀಸರಿಂದ ಇಬ್ಬರ ಬಂಧನ 

ಕಳೆದ ಜನವರಿ 26ರಂದು ಗಣರಾಜ್ಯೋತ್ಸವ ದಿನ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಅಪರಾಧ ವಿಭಾಗ ಇಬ್ಬರನ್ನು ಬುಧವಾರ ಬಂಧಿಸಿದೆ.

Published: 10th March 2021 11:41 AM  |   Last Updated: 10th March 2021 11:41 AM   |  A+A-


Arrested people

ಬಂಧಿತರು

Posted By : Sumana Upadhyaya
Source : ANI

ನವದೆಹಲಿ: ಕಳೆದ ಜನವರಿ 26ರಂದು ಗಣರಾಜ್ಯೋತ್ಸವ ದಿನ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಅಪರಾಧ ವಿಭಾಗ ಇಬ್ಬರನ್ನು ಬುಧವಾರ ಬಂಧಿಸಿದೆ.

ಪ್ರಕರಣ ಸಂಬಂಧ, ಡಚ್ ಪ್ರಜೆ ಪ್ರಸ್ತುತ ಇಂಗ್ಲೆಂಡ್ ನ ಬಿರ್ಮಿಂಗ್ ಹ್ಯಾಂನಲ್ಲಿ ನೆಲೆಸಿರುವ ಮಣಿಂದರ್ ಜಿತ್ ಸಿಂಗ್ ಮತ್ತು ಕೆಂಪ್ರೀತ್ ಸಿಂಗ್ ರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ದೆಹಲಿ ಪೊಲೀಸ್ ಅಪರಾಧ ವಿಭಾಗ ತಿಳಿಸಿದೆ.

ಗಣರಾಜ್ಯೋತ್ಸವ ದಿನ ಪ್ರತಿಭಟನಾ ನಿರತ ರೈತರು ದೆಹಲಿಯ ಕೆಲವೊಂದು ನಿರ್ದಿಷ್ಟ ರಸ್ತೆಗಳಲ್ಲಿ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದರು. ದೆಹಲಿ ಪೊಲೀಸರು ಅನುಮತಿಯನ್ನು ಸಹ ಕೊಟ್ಟಿದ್ದರು. ಆದರೆ ಶಾಂತಿಯುತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ದೆಹಲಿಯ ಕೆಂಪು ಕೋಟೆ ಬಳಿ ದಾಂಧಲೆ ನಡೆದಿತ್ತು. ಹಲವರ ಸಾವು-ನೋವು ಉಂಟಾಗಿ ಸಾರ್ವಜನಿಕ ಆಸ್ತಿ ಹಾನಿಗೊಳಗಾಗಿತ್ತು. 


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp