ಇವಿಎಂ ಹ್ಯಾಕಿಂಗ್ ಆರೋಪ: ಸುಳ್ಳು, ನಕಲಿ ಸುದ್ದಿಗಳ ವಿರುದ್ಧ ಆಯೋಗದಿಂದ ಕಠಿಣ ಕ್ರಮದ ಎಚ್ಚರಿಕೆ

ಪಂಚ ರಾಜ್ಯಗಳ ಚುನಾವಣೆಯ ಹೊಸ್ತಿಲಲ್ಲಿ ಮತಯಂತ್ರಗಳಿಗೆ ಸಂಬಂಧಿಸಿದ ಸುಳ್ಳು, ನಕಲಿ ಸುದ್ದಿಗಳ ಹಾವಳಿ ಹೆಚ್ಚಾಗಿದೆ. 

Published: 12th March 2021 11:43 AM  |   Last Updated: 12th March 2021 11:43 AM   |  A+A-


EVM hacking allegations: EC warns of action against fake news

ಇವಿಎಂ ಹ್ಯಾಕಿಂಗ್ ಆರೋಪ: ಸುಳ್ಳು, ನಕಲಿ ಸುದ್ದಿಗಳ ವಿರುದ್ಧ ಆಯೋಗದಿಂದ ಕಠಿಣ ಕ್ರಮದ ಎಚ್ಚರಿಕೆ

Posted By : Srinivas Rao BV
Source : Online Desk

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯ ಹೊಸ್ತಿಲಲ್ಲಿ ಮತಯಂತ್ರಗಳಿಗೆ ಸಂಬಂಧಿಸಿದ ಸುಳ್ಳು, ನಕಲಿ ಸುದ್ದಿಗಳ ಹಾವಳಿ ಹೆಚ್ಚಾಗಿದೆ. 

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅಂತಹ ನಕಲಿ, ಸುಳ್ಳು ಸುದ್ದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿಎಸ್ ಕೃಷ್ಣ ಮೂರ್ತಿ ಅವರು ಮತಯಂತ್ರಗಳ ಹ್ಯಾಕಿಂಗ್ ಬಗ್ಗೆ ಹೇಳಿಕೆ ನೀಡಿದ್ದರು, ಅದರಲ್ಲಿ ಮತಯಂತ್ರಗಳನ್ನು ಹ್ಯಾಕ್ ಮಾಡುವ ಮೂಲಕ ನಿರ್ದಿಷ್ಟ ಪಕ್ಷವೊಂದು ವಿಧಾನಸಭಾ ಚುನಾವಣೆ ಗೆದ್ದಿದೆ ಎಂದು ಅಭಿಪ್ರಾಯಪಟ್ಟಿದ್ದರೆಂದು ಡಿ.21, 2017 ರ ದಿನಾಂಕವಿದ್ದ ನಕಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿತ್ತು. 

ಇದನ್ನು ಗಮನಿಸಿರುವ ಚುನಾವಣಾ ಆಯೋಗ  ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರವಾಗಿ ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ಐಪಿಸಿ ಸೆಕ್ಷನ್ 500,ಅಡಿಯಲ್ಲಿ ಹಾಗೂ ಜನಪ್ರತಿನಿಧಿ ಕಾಯ್ದೆಯ  ಸೆಕ್ಷನ್ 128, 134 ಅಡಿಯಲ್ಲಿ ಎಫ್ಐಆರ್ ನ್ನು ದಾಖಲಿಸಿದೆ. 
 
ಯಾರ ಹೆಸರಿನಲ್ಲಿ ಸುಳ್ಳು ಸುದ್ದಿ ಹರಡುತ್ತಿತ್ತೋ ಆ ಮಾಜಿ ಚುನಾವಣಾ ಆಯುಕ್ತರೇ ಸ್ವತಃ ಇದು ನಕಲಿ, ಸುಳ್ಳು ಸುದ್ದಿ ಎಂಬ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿಕೆ ಸಮೇತ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಸುಳ್ಳು, ನಕಲಿ ಸುದ್ದಿಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. 

ಹಳೆಯ ಸುಳ್ಳು, ನಕಲಿ ಸುದ್ದಿಗಳನ್ನೇ ಈಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ ಎಂದು ಆಯೋಗ ಹೇಳಿದೆ. ಮಾ.27 ರಿಂದ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪಾಂಡಿಚೆರಿಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.


Stay up to date on all the latest ರಾಷ್ಟ್ರೀಯ news
Poll
Amarinder-Sidhu

ನವಜೋತ್ ಸಿಂಗ್ ಸಿಧುಗೆ ಅಮರೀಂದರ್ ಅವರ ಪ್ರಬಲ ವಿರೋಧವು ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಾನಿ ಮಾಡುತ್ತದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp