ಅತ್ಯಾಚಾರ ಸಂತ್ರಸ್ತೆ ಗರ್ಭಿಣಿಯಾದರೆ ಆಕೆಗೆ ಆಕೆಯ ಕಾನೂನು ಹಕ್ಕುಗಳ ಬಗ್ಗೆ ತಿಳಿಸಬೇಕು: ಸುಪ್ರೀಂ ಕೋರ್ಟ್  

ಅತ್ಯಾಚಾರದ ಸಂತ್ರಸ್ತೆ ಗರ್ಭಿಣಿಯಾದರೆ ಆಕೆಯ ಕಾನೂನು ಹಕ್ಕುಗಳ ಬಗ್ಗೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

Published: 12th March 2021 05:34 PM  |   Last Updated: 12th March 2021 06:01 PM   |  A+A-


The bench was hearing a plea filed by the minor girl who has said that she was pregnant after being raped by one of her relatives. (Representational Image)

ಗರ್ಭಿಣಿ (ಸಾಂಕೇತಿಕ ಚಿತ್ರ)

Posted By : Srinivas Rao BV
Source : The New Indian Express

ನವದೆಹಲಿ: ಅತ್ಯಾಚಾರದ ಸಂತ್ರಸ್ತೆ ಗರ್ಭಿಣಿಯಾದರೆ ಆಕೆಯ ಕಾನೂನು ಹಕ್ಕುಗಳ ಬಗ್ಗೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ಇದೇ ವೇಳೆ ಇಂತಹ ಪ್ರಕರಣಗಳಲ್ಲಿ 20 ವಾರಗಳಿಗೂ ಮೀರಿದ ಭ್ರೂಣವನ್ನು ಗರ್ಭಪಾತ ಮಾಡುವ ಸಂಬಂಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈದ್ಯಕೀಯ ಮಂಡಳಿಗಳನ್ನು ಸ್ಥಾಪಿಸುವುದಕ್ಕಾಗಿ ಮನವಿ ಮಾಡಿ ಸಲ್ಲಿಸಲಾದ ಅರ್ಜಿಯ ಸಂಬಂಧ ಕೇಂದ್ರಕ್ಕೆ ನೊಟೀಸ್ ಜಾರಿಗೊಳಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ, ನ್ಯಾ. ಎಎಸ್ ಬೋಪಣ್ಣ ಅವರಿದ್ದ ಪೀಠ ಹೇಳಿದೆ. ಗರ್ಭಿಣಿ ಕಾಯ್ದೆ 1971 ರ ಸೆಕ್ಷನ್ 3 ರ ಪ್ರಕಾರ  20 ವಾರಗಳ ಕಾಲದ ಭ್ರೂಣವನ್ನು ಮಾತ್ರ ಗರ್ಭಪಾತ ಮಾಡಬಹುದಾಗಿದೆ. 

14 ವರ್ಷದ ಅತ್ಯಾಚಾರ ಸಂತ್ರಸ್ತೆ ಈಗ ಗರ್ಭಿಣಿಯಾಗಿದ್ದು, ಭ್ರೂಣ 26 ನೇ ವಾರದ ಗರ್ಭಾವಸ್ಥೆಯಲ್ಲಿದೆ. ಇದನ್ನು ಗರ್ಭಪಾತ ಮಾಡಿಸುವುದಕ್ಕಾಗಿ ಕೆಲವು ವೈದ್ಯಕೀಯ ಅಭಿಪ್ರಾಯದ ಕಾರಣದಿಂದ ಅನುಮತಿ ಕೇಳದೇ ಇರಲು ನಿರ್ಧರಿಸಲಾಗಿದೆ ಎಂದು ಸಂತ್ರಸ್ತೆ ಪರವಾಗಿ ವಾದ ಮಾಡಿರುವ ವಕೀಲರಾದ ವಿಕೆ ಬಿಜು ಹೇಳಿದ್ದಾರೆ.  ಅರ್ಜಿಯನ್ನು ಸಿದ್ಧಪಡಿಸುತ್ತಿದ್ದಾಗ ಅತ್ಯಾಚಾರದ ಸಂತ್ರಸ್ತೆಯ ಪೋಷಕರ ನೋವನ್ನು ನೋಡಿದ್ದೇನೆ, ಆದ್ದರಿಂದ ನಾನು ಭ್ರೂಣ ಹತ್ಯೆಗೆ ಅನುಮತಿ ಕೇಳುತ್ತಿಲ್ಲ,  ಇಂತಹ ಪ್ರಕರಣಗಳಲ್ಲಿ 20 ವಾರಗಳಿಗೂ ಮೀರಿದ ಭ್ರೂಣವನ್ನು ಗರ್ಭಪಾತ ಮಾಡುವ ಸಂಬಂಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈದ್ಯಕೀಯ ಮಂಡಳಿಗಳನ್ನು ಸ್ಥಾಪಿಸುವುದಕ್ಕಾಗಿ ಮನವಿ ಮಾಡುತ್ತಿದ್ದೇನೆ ಎಂದು ವಕೀಲರು ಹೇಳಿದ್ದಾರೆ. 

ನೊಟೀಸ್ ಜಾರಿ ಮಾಡುತ್ತಿರುವುದಾಗಿ ಹೇಳಿರುವ ನ್ಯಾಯಾಲಯ, ಈ ರೀತಿಯ ಪ್ರಕರಣಗಳನ್ನು ನಿಭಾಯಿಸುವುದಕ್ಕಾಗಿ ಸ್ಥಳೀಯ ಮಂಡಳಿಗಳಿದ್ದರೆ ಸಹಕಾರಿಯಾಗಿರಲಿವೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರಿಗೆ ಹೇಳಿದೆ. 

ಅತ್ಯಾಚಾರ ಪ್ರಕರಣಗಳು ವರದಿಯಾಗದೇ ಇದ್ದಲ್ಲಿ ಅದು ಬೇರೆ, ಆದರೆ ವರದಿಯಾದರೆ, ಸಂತ್ರಸ್ತೆ ಗರ್ಭಿಣಿಯಾದಲ್ಲಿ ಆಕೆಗೆ ಸಿಗಬಹುದಾದ ಕಾನೂನು ಹಕ್ಕುಗಳ ಬಗ್ಗೆ ಮನವರಿಕೆ ಮಾಡಬೇಕಾದ ವ್ಯವಸ್ಥೆ ಇರಬೇಕು ಎಂದು ಕಾನೂನು ಅಧಿಕಾರಿಗೆ ನ್ಯಾಯಪೀಠ ತಿಳಿಸಿದೆ. ಈ ಸಂಬಂಧ ವಿವರಗಳನ್ನು ಹೊಂದಿರುವ ಪ್ರಮಾಣಪತ್ರವನ್ನು ಸಲ್ಲಿಸುವುದಾಗಿ ಕಾನೂನು ಅಧಿಕಾರಿ ಹೇಳಿದ್ದಾರೆ. 

ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ 2020 ನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು, ರಾಜ್ಯಸಭೆಯಲ್ಲಿ ಚರ್ಚೆಯಲ್ಲಿದೆ ಎಂದೂ ಭಾಟಿ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp