ಎನ್ ಸಿ ಆರ್ ವಾಯು ಗುಣಮಟ್ಟ ನಿರ್ವಹಣೆಗಾಗಿ ರಚನೆಯಾದ ಕೇಂದ್ರದ ಆಯೋಗ ಐದು ತಿಂಗಳಲ್ಲಿಯೇ ಸ್ಥಗಿತ!

ರಾಷ್ಟ್ರೀಯ ರಾಜಧಾನಿ ಮತ್ತು ಅದಕ್ಕೆ ಹೊಂದಿಕೊಂಡಂತ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಗಾಗಿ ರಚನೆಯಾದ ಕೇಂದ್ರ ಸರ್ಕಾರದ ಆಯೋಗ ಐದು ತಿಂಗಳಲ್ಲಿಯೇ ಸ್ಥಗಿತಗೊಂಡಿದೆ.

Published: 13th March 2021 02:52 PM  |   Last Updated: 13th March 2021 03:05 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ನವದೆಹಲಿ: ರಾಷ್ಟ್ರೀಯ ರಾಜಧಾನಿ ಮತ್ತು ಅದಕ್ಕೆ ಹೊಂದಿಕೊಂಡಂತ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಗಾಗಿ ರಚನೆಯಾದ ಕೇಂದ್ರ ಸರ್ಕಾರದ ಆಯೋಗ ಐದು ತಿಂಗಳಲ್ಲಿಯೇ ಸ್ಥಗಿತಗೊಂಡಿದೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಆಯೋಗ ರಚನೆಗೊಂಡಿತ್ತು. ಆದರೆ, ಅದರ ಸ್ಥಾಪನೆಗೆ  ಸಂಬಂಧಿಸಿದ ಸುಗ್ರೀವಾಜ್ಞೆ ಸಂಸತ್ತಿನಲ್ಲಿ ಮಂಡನೆಯಾಗದ ಹಿನ್ನೆಲೆಯಲ್ಲಿ  ಆಯೋಗ ಮುಚ್ಚಲ್ಪಟ್ಟಿದೆ.

ಆಯೋಗ ರಚನೆಯಾದ ಆರು ವಾರುಗಳಲ್ಲಿ ಸುಗ್ರೀವಾಜ್ಞೆ ಸಂಸತ್ತಿನಲ್ಲಿ ಮಂಡನೆಯಾಗದ ಹಿನ್ನೆಲೆಯಲ್ಲಿ ಅದು ಮುಚ್ಚಲ್ಪಟ್ಟಿದೆ ಎಂದು ಕೇಂದ್ರ ಪರಿಸರ ಕಾರ್ಯದರ್ಶಿ ಆರ್ ಪಿ ಗುಪ್ತಾ ಹೇಳಿದ್ದಾರೆ. 

ಸುಗ್ರೀವಾಜ್ಞೆ ಎಂದಿಗೂ ಕಾಯಿದೆಯಾಗಲಿಲ್ಲ. ಯಾವುದೇ ಸುಗ್ರೀವಾಜ್ಞೆಯನ್ನು ಆರು ವಾರಗಳಲ್ಲಿ ಸಂಸತ್ತಿನಲ್ಲಿ ಮಂಡಿಸಬೇಕಾಗುತ್ತದೆ. ಅದು ಆಗಲಿಲ್ಲ, ಆದ್ದರಿಂದ ಸುಗ್ರೀವಾಜ್ಞೆ ಮಹತ್ವ ಕಳೆದುಕೊಂಡಿದ್ದು, ಆಯೋಗವನ್ನು ವಿಸರ್ಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಂಎಂ ಕುಟ್ಟಿ ಆಯೋಗದ ಅಧ್ಯಕ್ಷರಾಗಿದ್ದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp