'ಉದ್ಯಮಿಗಳು ಕೇಂದ್ರ ಸರ್ಕಾರ ನಡೆಸುತ್ತಿದ್ದಾರೆ': ಕೇಂದ್ರದ ವಿರುದ್ಧ ರಾಕೇಶ್ ಟಿಕೈತ್ ವಾಗ್ದಾಳಿ

ಭೂಮಿಯನ್ನು ಕಸಿದುಕೊಳ್ಳುವ ಮೂಲಕ ಹಣ ಸಂಪಾದಿಸುತ್ತಿದ್ದ ಉದ್ಯಮಿಗಳಿಂದ ಕೇಂದ್ರ ಸರ್ಕಾರ ನಡೆಸಲಾಗುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಸಿಂಗ್...

Published: 14th March 2021 10:33 PM  |   Last Updated: 14th March 2021 10:33 PM   |  A+A-


rakesh-t

ರಾಕೇಶ್ ಟಿಕೈತ್

Posted By : Lingaraj Badiger
Source : PTI

ರೇವಾ: ಭೂಮಿಯನ್ನು ಕಸಿದುಕೊಳ್ಳುವ ಮೂಲಕ ಹಣ ಸಂಪಾದಿಸುತ್ತಿದ್ದ ಉದ್ಯಮಿಗಳಿಂದ ಕೇಂದ್ರ ಸರ್ಕಾರ ನಡೆಸಲಾಗುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಸಿಂಗ್ ಟಿಕೈತ್ ಅವರು ಭಾನುವಾರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರೇವಾದಲ್ಲಿ ಇಂದು ರೈತರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಟಿಕೈತ್ ಅವರು, ಈಗ ಹೊಸದಾಗಿ ಹಸಿವ ವ್ಯಾಪಾರ ಪ್ರಾರಂಭವಾಗಿದೆ. ಇದರಿಂದ ಮನುಷ್ಯರು ದಿನಕ್ಕೆ ಎರಡು ಬಾರಿ, ವರ್ಷಕ್ಕೆ 700 ಬಾರಿ ಹಸಿವಿನಿಂದ ಬಳಲುತ್ತಿದ್ದಾರೆ. ಉದ್ಯಮಿಗಳು ಆಹಾರ ಧಾನ್ಯಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಹಸಿವಿನ ವ್ಯಾಪಾರ ಮಾಡುತ್ತಿದ್ದಾರೆ" ಎಂದು ಟಿಕೈತ್ ಆಕ್ರೋಶ ವ್ಯಕ್ತಪಡಿಸಿದರು.

ರಾಜಸ್ಥಾನ ಮತ್ತು ಹರಿಯಾಣದ ಉದ್ಯಮಿಗಳು ಅಲ್ಪ ಮೊತ್ತಕ್ಕೆ ಭೂಮಿಯನ್ನು ಖರೀದಿಸುತ್ತಿದ್ದಾರೆ ಮತ್ತು 14 ಲಕ್ಷ ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಬೃಹತ್ ಗೋದಾಮುಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ಇದಕ್ಕಾಗಿ ಕೇಂದ್ರದ ಹೊಸ ಕೃಷಿ ಕಾನೂನುಗಳು ಬಂದವು ಎಂದು ಆರೋಪಿಸಿದರು.

"ಇದರರ್ಥ ಕೇಂದ್ರದಲ್ಲಿನ ಈ ಸರ್ಕಾರವನ್ನು ಒಂದು ಪಕ್ಷ ನಡೆಸುತ್ತಿಲ್ಲ, ಉದ್ಯಮಿಗಳು ನಡೆಸುತ್ತಿದ್ದಾರೆ. ಇದು ಸಂಕಷ್ಟದಲ್ಲಿರುವ ರೈತರಿಗೆ ಮಾತ್ರ ಅಲ್ಲ, ರೈಲ್ವೆಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ವಿರೋಧ ಪಕ್ಷ ದುರ್ಬಲವಾಗಿದ್ದು ಇದನ್ನು ವಿರೋಧಿಸಬೇಕಾದ ಯುವಕರು ನಿದ್ದೆ ಮಾಡುತ್ತಿದ್ದಾರೆ" ಎಂದು ಟಿಕೈತ್ ಹೇಳಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp