ಆಂಧ್ರ ಪ್ರದೇಶದ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಗೆಲುವಿನತ್ತ ಆಡಳಿತಾರೂಢ ವೈಎಸ್ ಆರ್ ಸಿಪಿ 

ಆಂಧ್ರ ಪ್ರದೇಶದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ವೈಎಸ್ ಆರ್ ಸಿ ಭರ್ಜರಿ ಜಯಭೇರಿ ಬಾರಿಸುವತ್ತ ದಾಪುಗಾಲು ಇಡುತ್ತಿದೆ. ಇತ್ತೀಚಿನ ಫಲಿತಾಂಶದ ಟ್ರೆಂಡ್ ನೋಡಿದಾಗ ಎಲ್ಲಾ 10 ನಗರ ಪಾಲಿಕೆ ಮತ್ತು 69 ಪುರಸಭೆಗಳಲ್ಲಿ ಮತ ಎಣಕೆ ಪ್ರಗತಿಯಲ್ಲಿದ್ದು ಎಲ್ಲ ಕಡೆ ವೈಎಸ್ ಆರ್ ಸಿ ಮುಂಚೂಣಿಯಲ್ಲಿದೆ.

Published: 14th March 2021 01:22 PM  |   Last Updated: 14th March 2021 01:22 PM   |  A+A-


Andhra Pradesh CM YS Jagan Mohan Reddy

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ

Posted By : Sumana Upadhyaya
Source : The New Indian Express

ವಿಜಯವಾಡ: ಆಂಧ್ರ ಪ್ರದೇಶದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ವೈಎಸ್ ಆರ್ ಸಿ ಭರ್ಜರಿ ಜಯಭೇರಿ ಬಾರಿಸುವತ್ತ ದಾಪುಗಾಲು ಇಡುತ್ತಿದೆ. ಇತ್ತೀಚಿನ ಫಲಿತಾಂಶದ ಟ್ರೆಂಡ್ ನೋಡಿದಾಗ ಎಲ್ಲಾ 10 ನಗರ ಪಾಲಿಕೆ ಮತ್ತು 69 ಪುರಸಭೆಗಳಲ್ಲಿ ಮತ ಎಣಕೆ ಪ್ರಗತಿಯಲ್ಲಿದ್ದು ಎಲ್ಲ ಕಡೆ ವೈಎಸ್ ಆರ್ ಸಿ ಮುಂಚೂಣಿಯಲ್ಲಿದೆ.

ವಿರೋಧ ಪಕ್ಷ ಟಿಡಿಪಿ ಗುಂಟೂರು ನಗರ ಪಾಲಿಕೆಗಳಲ್ಲಿ ಸಹ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಗಳಿಸಲು ಸಾಧ್ಯವಾಗುತ್ತಿಲ್ಲ.

12 ನಗರ ಪಾಲಿಕೆ ಮತ್ತು 71 ಪುರಸಭೆಗಳಿಗೆ ಮಾರ್ಚ್ 10ರಂದು ಚುನಾವಣೆ ನಡೆದಿತ್ತು. ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಎಲೂರು ನಗರ ಪಾಲಿಕೆಯ ಮತ ಎಣಿಕೆ ಕಾರ್ಯ ನಡೆದಿಲ್ಲ. ಚಿಲಕಲುರಿಪೆಟ್ ಮುನ್ಸಿಪಾಲಿಟಿಯ ಮತ ಎಣಿಕೆ ನಡೆದರೂ ಕೂಡ ಫಲಿತಾಂಶ ಪ್ರಕಟ ಹೈಕೋರ್ಟ್ ಆದೇಶವನ್ನು ಅವಲಂಬಿಸಿದೆ.

ಇತ್ತೀಚಿನ ವರದಿ ಬಂದಾಗ ವೈಎಸ್ ಆರ್ ಸಿ ತಿರುಪತಿ, ಚಿತ್ತೂರು, ಒಂಗೊಲೆ ಮತ್ತು ಕುರ್ನೂಲು ಮುನ್ಸಿಪಾಲಿಟಿ ಗಳಲ್ಲಿ ಮುಂಚೂಣಿಯಲ್ಲಿದ್ದು 69 ಪುರಸಭೆಗಳಲ್ಲಿ ಸಹ ಮುಂಚೂಣಿಯಲ್ಲಿದೆ.

ವಿರೋಧ ಪಕ್ಷ ಟಿಡಿಪಿ ತಕ್ಕ ಮಟ್ಟಿಗೆ ಸ್ಪರ್ಧೆ ನೀಡಿದ್ದರೆ, ಬಿಜೆಪಿ-ಜನ ಸೇನಾ ಪಕ್ಷ ಎಲ್ಲಿಯೂ ತನ್ನ ಛಾಪು ಮೂಡಿಸಿಲ್ಲ. ಕಡಪ, ಪೂರ್ವ ಗೋದಾವರಿ, ಒಂಗೊಲೆ ಮತ್ತು ಇತರೆಡೆಗಳಲ್ಲಿ ವೈಎಸ್ ಆರ್ ಸಿ ನಗರ ಪಾಲಿಕೆ ಮತ್ತು ಪುರಸಭೆಗಳಲ್ಲಿ ಮುಂಚೂಣಿ ವಹಿಸಿದೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp