ಕಳೆದ ಎರಡು ವರ್ಷಗಳಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವಾಗಿಲ್ಲ: ಕೇಂದ್ರ ಸರ್ಕಾರ

ಕಳೆದ ಎರಡು ವರ್ಷಗಳಲ್ಲಿ  2 ಸಾವಿರ  ಮುಖಬೆಲೆಯ ಕರೆನ್ಸಿ ನೋಟುಗಳು ಮುದ್ರಣವಾಗಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

Published: 15th March 2021 05:04 PM  |   Last Updated: 15th March 2021 05:13 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : PTI

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ 2 ಸಾವಿರ  ಮುಖಬೆಲೆಯ ಕರೆನ್ಸಿ ನೋಟುಗಳು ಮುದ್ರಣವಾಗಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಲೋಕಸಭೆಯಲ್ಲಿಂದು ಈ ಕುರಿತು  ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಸಾರ್ವಜನಿಕರ ವ್ಯವಹಾರಿಕ ಬೇಡಿಕೆ ಅನುಕೂಲತೆಗಾಗಿ ಆರ್ ಬಿಐನೊಂದಿಗೆ ಸಮಾಲೋಚಿಸಿ ಕಳೆದ ಎರಡು ವರ್ಷಗಳಿಂದ ಈ ನಿರ್ಧಿಷ್ಟ ನೋಟುಗಳ ಮುದ್ರಣ ಮಾಡದಿರುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು. 2019-20 ಮತ್ತು 2020-21ರ ವರ್ಷದಲ್ಲಿ 2 ಸಾವಿರ ರೂ. ನೋಟ್ ಗಳನ್ನು ಮುದ್ರಣ ಮಾಡಿಲ್ಲ ಎಂದು ಅವರು ಮಾಹಿತಿ ನೀಡಿದರು.

2016-17ರ ಆರ್ಥಿಕ  ವರ್ಷದಲ್ಲಿ  3,542,991 ಮಿಲಿಯನ್  2 ಸಾವಿರ ರೂ. ನೋಟುಗಳನ್ನು ಮುದ್ರಣ ಮಾಡಲಾಗಿತ್ತು ಎಂದು ಆರ್ ಬಿಐ 2019ರಲ್ಲಿ ಹೇಳಿಕೆ ನೀಡಿತ್ತು. ಆದಾಗ್ಯೂ, 2017-18ರಲ್ಲಿ ಕೇವಲ 111.507 ಮಿಲಿಯನ್ ನೋಟುಗಳನ್ನು ಮಾತ್ರ ಮುದ್ರಣ ಮಾಡಲಾಗಿತ್ತು. 2018-19ರಲ್ಲಿ ಇವುಗಳನ್ನು 46,690 ಮಿಲಿಯನ್ ನೋಟುಗಳಿಗೆ ಇಳಿಕೆ ಮಾಡಲಾಯಿತು. ಕಪ್ಪು ಹಣ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ನಕಲಿ ನೋಟುಗಳು ಮತ್ತು ಕಪ್ಪು ಹಣವನ್ನು ತಡೆಗಟ್ಟುವ ನಿಟ್ಟಿನಲ್ಲಿ 500 ರೂ. ಮತ್ತು 1 ಸಾವಿರ ರೂ. ನೋಟುಗಳನ್ನು ಸರ್ಕಾರ ಅಮಾನ್ಯಗೊಳಿಸಿದ ನಂತರ ನವೆಂಬರ್ 2016ರಂದು 2 ಸಾವಿರ ಮುಖಬೆಲೆಯ ನೋಟುಗಳನ್ನು ಪರಿಚಯಿಸಿತ್ತು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp