ಕ್ರಿಮಿನಲ್ ಕೇಸ್ ಗಳ ಬಗ್ಗೆ ಮಾಹಿತಿ ನೀಡದ ಮಮತಾ: ನಾಮಪತ್ರ ತಿರಸ್ಕರಿಸಲು ಆಯೋಗಕ್ಕೆ ಸುವೇಂದು ಒತ್ತಾಯ

ನಾಮಪತ್ರದಲ್ಲಿ ತನ್ನ ವಿರುದ್ಧದ ಆರು ಕ್ರಿಮಿನಲ್ ಕೇಸ್ ಗಳನ್ನು ಬಹಿರಂಗಗೊಳಿಸದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ನಂದಿಗ್ರಾಮದಲ್ಲಿ ದೀದಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

Published: 15th March 2021 06:36 PM  |   Last Updated: 15th March 2021 06:46 PM   |  A+A-


Mamata_Suvedu_adhikari1

ಮಮತಾ ಬ್ಯಾನರ್ಜಿ, ಸುವೇಂದು ಅಧಿಕಾರಿ

Posted By : Nagaraja AB
Source : The New Indian Express

ಕೊಲ್ಕತ್ತಾ: ನಾಮಪತ್ರದಲ್ಲಿ ತನ್ನ ವಿರುದ್ಧದ ಆರು ಕ್ರಿಮಿನಲ್ ಕೇಸ್ ಗಳನ್ನು ಬಹಿರಂಗಗೊಳಿಸದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ನಂದಿಗ್ರಾಮದಲ್ಲಿ ದೀದಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವ ಅಧಿಕಾರಿ, ಅಸ್ಸಾಂನಲ್ಲಿ ತನ್ನ ವಿರುದ್ಧದ ಐದು ಕೇಸ್ ಗಳು ಮತ್ತು ಪಶ್ಚಿಮ ಬಂಗಾಳದಲ್ಲಿ ಸಿಬಿಐ ದಾಖಲಿಸಿರುವ ಮತ್ತೊಂದು ಕೇಸ್ ನ ಮಾಹಿತಿಯನ್ನು ಮುಚ್ಚಿಡಲಾಗಿದೆ ಎಂದು ಅವರು ಹೇಳಿದ್ದಾರೆ.

ದೂರಿನಲ್ಲಿ ಕೇಸ್ ಗಳ ಸಂಖ್ಯೆಗಳನ್ನು ಉಲ್ಲೇಖಿಸಿದ್ದರೂ ಟಿಎಂಸಿ ಮುಖಂಡೆ ಮೇಲಿನ ಆರೋಪಗಳು ಸಮರ್ಪಕವಾಗಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿಯಾಗಿರುವ ಮಮತಾ ಬ್ಯಾನರ್ಜಿ ಅಫಿಡವಿಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಆರು ಕೇಸ್ ಗಳನ್ನು ಉಲ್ಲೇಖಿಸಿಲ್ಲ. ಇವುಗಳಲ್ಲಿ ಐದು ಅಸ್ಸಾಂಗೆ ಸೇರಿದ್ದರೆ ಮತ್ತೊಂದು ಸಿಬಿಐ ಕೇಸ್ ಆಗಿದೆ.

ಮಮತಾ ಬ್ಯಾನರ್ಜಿ ನಾಮಪತ್ರ ತಿರಸ್ಕರಿಸಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇನೆ. ಅವರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯಿದೆ. ಅವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇನೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.

ಈ ವಿಚಾರದ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟಿಎಂಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp