ರಾಜ್ಯದ ಮರಾಠಿ ಪ್ರಾಬಲ್ಯದ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವ ಪ್ರಸ್ತಾವ ಇಲ್ಲ: ಕೇಂದ್ರ ಸರ್ಕಾರ 

 ಕರ್ನಾಟಕದಲ್ಲಿ ಮಾರಾಠಿ ಭಾಷೆಯನ್ನಾಡುವ ಜನರ ಪ್ರಾಬಲ್ಯದ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವ ಪ್ರಸ್ತಾವ ಇಲ್ಲ ಎಂದು ಸರ್ಕಾರ ಲೋಕಸಭೆಯಲ್ಲಿ ಮಂಗಳವಾರ ತಿಳಿಸಿದೆ.

Published: 16th March 2021 07:20 PM  |   Last Updated: 16th March 2021 07:32 PM   |  A+A-


Nithyanada_Rai1

ಕೇಂದ್ರ ಗೃಹ ಸಚಿವಾಲಯ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ

Posted By : Nagaraja AB
Source : Online Desk

ನವದೆಹಲಿ: ಕರ್ನಾಟಕದಲ್ಲಿ ಮಾರಾಠಿ ಭಾಷೆಯನ್ನಾಡುವ ಜನರ ಪ್ರಾಬಲ್ಯದ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವ ಪ್ರಸ್ತಾವ ಇಲ್ಲ ಎಂದು ಸರ್ಕಾರ ಲೋಕಸಭೆಯಲ್ಲಿ ಮಂಗಳವಾರ ತಿಳಿಸಿದೆ.

ಈ ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವ್ಯಕ್ತಿಗಳಿಂದ ಆಗಿಂದ್ದಾಗೆ ಬೇಡಿಕೆಗಳು ಬರುತ್ತಿರುವುದಾಗಿ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ತಿಳಿಸಿದರು. ಆದಾಗ್ಯೂ, ಇಂತಹ ಯಾವುದೇ ಪ್ರಸ್ತಾವನೆಯನ್ನು ಪರಿಗಣಿಸಿಲ್ಲ ಎಂದು ಅವರು ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

2011ರ ಜನಗಣತಿಯಂತೆ ಮಹಾರಾಷ್ಟ್ರ- ಕರ್ನಾಟಕದ ಗಡಿಯಲ್ಲಿ ಮರಾಠಿ ಭಾಷೆಯನ್ನಾಡುವ ಜನಸಂಖ್ಯೆ 55, 98. 325 ಇದೆ. ದುಧಾನಿ, ಇಚಾಲ್ ಕಾರಂಜಿ, ಕಾಗಲ್, ಕಮಲ್ ನಗರ್, ಮೈನ್ ದರ್ಗಿ, ನಿಪ್ಪಾಣಿ, ಸಾದಲ್ಗಿ ಮತ್ತು ಸಂಕೇಶ್ವರದಲ್ಲಿ ಮರಾಠಿ ಭಾಷೆಯನ್ನಾಡುವ ಜನರಿರುವುದಾಗಿ ರೈ ಸದನಕ್ಕೆ ತಿಳಿಸಿದರು.

ಈ ಕುರಿತಂತೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಬೆಳಗಾವಿ ಯಾವಾಗಲೂ ರಾಜ್ಯದ ಅವಿಭಾಜ್ಯ ಅಂಗವಾಗಿದೆ. ಕಾಂಗ್ರೆಸ್ ಮತ್ತು ಶಿವಸೇನಾ ತಮ್ಮ ಸ್ವಂತ ವೈಫಲ್ಯಗಳನ್ನು ಮರೆ ಮಾಚಲು ಇಂತಹ ಸಣ್ಣತನದ ರಾಜಕೀಯ ಆಡುವುದನ್ನು ನಿಲ್ಲಿಸಲು ಇದು ಸೂಕ್ತ ಸಂದರ್ಭವಾಗಿದೆ ಎಂದು ಹೇಳಿದೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp