ವಿಮಾನದಲ್ಲಿ ಮಾಸ್ಕ್ ಧರಿಸದೇ ಇದ್ದ ನಾಲ್ವರ ವಿರುದ್ಧ ಕೇಸ್!

ಮಾಸ್ಕ್ ಧರಿಸುವಂತೆ ಪದೇ ಪದೇ ಮನವಿ ಮಾಡಿದ ಹೊರತಾಗಿಯೂ ಮೊಂಡುತನ ಪ್ರದರ್ಶಿಸಿ ನಿಯಮಗಳನ್ನು ಉಲ್ಲಂಘಿಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

Published: 17th March 2021 03:20 PM  |   Last Updated: 17th March 2021 03:20 PM   |  A+A-


Brazilian Flight Accident

ಸಾಂದರ್ಭಿಕ ಚಿತ್ರ

Posted By : Srinivas Rao BV
Source : Online Desk

ನವದೆಹಲಿ: ವಿಮಾನ ಪ್ರಯಾಣದ ವೇಳೆ ಮಾಸ್ಕ್ ಧರಿಸುವಂತೆ ಪದೇ ಪದೇ ಮನವಿ ಮಾಡಿದ ಹೊರತಾಗಿಯೂ ಮೊಂಡುತನ ಪ್ರದರ್ಶಿಸಿ ನಿಯಮಗಳನ್ನು ಉಲ್ಲಂಘಿಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಕೋವಿಡ್-19 ನಿಯಮ ಉಲ್ಲಂಘನೆ ಪ್ರಕರಣವನ್ನು ಈ ನಾಲ್ವರ ವಿರುದ್ಧ ದಾಖಲಿಸಲಾಗಿದೆ. ಇದೇ ಮೊದಲ ಬಾರಿಗೆ ಕೋವಿಡ್-19 ನಿಯಮ ಉಲ್ಲಂಘನೆಯಡಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಜಮ್ಮು-ದೆಹಲಿ ನಡುವೆ ಸಂಚರಿಸುತ್ತಿದ್ದ ಅಲೈಯನ್ಸ್ ಏರ್ ಫ್ಲೈಟ್ ನಲ್ಲಿದ್ದ ನಾಲ್ವರಿಗೆ ಪೈಲಟ್ ಗಳು ಕ್ಯಾಬಿನ್ ಸಿಬ್ಬಂದಿಗಳೂ ಸೇರಿದಂತೆ ಹಲವರು ಮಾಸ್ಕ್ ಧರಿಸಲು ಮನವಿ ಮಾಡಿದ್ದರಾದರೂ ಮೊಂಡುತನ ಪ್ರದರ್ಶಿಸಿ ಮಾಸ್ಕ್ ಧರಿಸದೇ ಕುಳಿತಿದ್ದರು. 

ದೆಹಲಿಗೆ ವಿಮಾನ ಆಗಮಿಸುತ್ತಿದ್ದಂತೆಯೇ ಅವರನ್ನು ಭದ್ರತಾ ಸಂಸ್ಥೆಗಳ ವಶಕ್ಕೆ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದ್ದರ ಪರಿಣಾಮವಾಗಿ ನಾಲ್ವರಿಗೂ ಒಂದಷ್ಟು ಕಾಲ ಅಲೈಯನ್ಸ್ ಏರ್ ಫ್ಲೈಟ್ ನಲ್ಲಿ ಸಂಚರಿಸುವುದಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. 

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp