ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ: ಪೊಲೀಸ್ ಅಧಿಕಾರಿ ವಾಜೆ ಕಚೇರಿ ಮೇಲೆ ರಾತ್ರೋರಾತ್ರಿ ಎನ್ಐಎ ದಾಳಿ, ಮರ್ಸಿಡಿಸ್ ಕಾರು, ನಗದು ವಶ

ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಪೋಟಕಗಳಿದ್ದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಕಚೇರಿ ಮೇಲೆ ಎನ್ಐಎ ಮಂಗಳವಾರ ರಾತ್ರೋರಾತ್ರಿ ದಾಳಿ ನಡೆಸಿದ್ದು, ದಾಳಿ ವೇಳೆ ಮರ್ಸಿಡಿಸ್ ಕಾರು, ನಗದು ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Published: 17th March 2021 01:04 PM  |   Last Updated: 17th March 2021 01:29 PM   |  A+A-


NIA officers investigate Sachin Vaze's Mercedes car, in connection with a probe into the recovery of explosives from a car parked near Mukesh Ambanis house.

ಎನ್ಐಎ ವಶಕ್ಕೆ ಪಡೆದಿರುವ ಕಾರು.

Posted By : Manjula VN
Source : The New Indian Express

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಪೋಟಕಗಳಿದ್ದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಕಚೇರಿ ಮೇಲೆ ಎನ್ಐಎ ಮಂಗಳವಾರ ರಾತ್ರೋರಾತ್ರಿ ದಾಳಿ ನಡೆಸಿದ್ದು, ದಾಳಿ ವೇಳೆ ಮರ್ಸಿಡಿಸ್ ಕಾರು, ನಗದು ಹಾಗೂ ಮತ್ತಿತರ ಮಹತ್ವದ ದಾಖಲೆಗಳು ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ತಂಡ, ವಾಜೆ ಕಚೇರಿಯಿಂದ ಕೆಲವೊಂದು ದೋಷಾರೋಪಣೆಯ ದಾಖಲೆಗಳು ಮತ್ತು ಲ್ಯಾಪ್‌ಟಾಪ್‌, ಐಪಾಡ್ ಮತ್ತು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದೆ ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

‘ವಾಜೆ ಬಳಸುತ್ತಿದ್ದ ಕಪ್ಪು ಬಣ್ಣದ ಮರ್ಸಿಡಿಸ್ ಕಾರನ್ನು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ಬಳಿಯ ವಾಹನ ನಿಲುಗಡೆ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದ್ದು, ರೂ.5 ಲಕ್ಷ  ನಗದು, ನೋಟ್ ಎಣಿಸುವ ಯಂತ್ರ, ಎರಡು ನಂಬರ್ ಪ್ಲೇಟ್‌ಗಳು ಮತ್ತು ಕೆಲವು ವಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ‘ ಎಂದು ಮಾಹಿತಿ ನೀಡಿದ್ದಾರೆ.

ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ವಾಜೆ ಅವರನ್ನು ಮಾ. 13ರಂದು ಬಂಧಿಸಲಾಗಿತ್ತು.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp