ಟಿಆರ್ ಪಿ ಹಗರಣ: ಸಾಕ್ಷ್ಯವಿದ್ದರೂ ಆರೋಪಿಗಳ ಪಟ್ಟಿಯಲ್ಲಿ ರಿಪಬ್ಲಿಕ್ ಟಿವಿ, ಅರ್ನಬ್ ಹೆಸರು ಏಕಿಲ್ಲ; ಬಾಂಬೆ ಹೈಕೋರ್ಟ್ ಪ್ರಶ್ನೆ

ಟಿಆರ್ ಪಿ ಹಗರಣದಲ್ಲಿ ಸಾಕ್ಷ್ಯವಿದ್ದರೂ ರಿಪಬ್ಲಿಕ್, ಅರ್ನಬ್ ಗೋಸ್ವಾಮಿ ಅವರ ಹೆಸರುಗಳು ಆರೋಪಿಗಳ ಪಟ್ಟಿಯಲ್ಲಿ ಏಕಿಲ್ಲ ಎಂದು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ. 

Published: 17th March 2021 06:45 PM  |   Last Updated: 17th March 2021 07:05 PM   |  A+A-


arnab

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ

Posted By : Srinivas Rao BV
Source : The New Indian Express

ಮುಂಬೈ: ಟಿಆರ್ ಪಿ ಹಗರಣದಲ್ಲಿ ಸಾಕ್ಷ್ಯವಿದ್ದರೂ ರಿಪಬ್ಲಿಕ್, ಅರ್ನಬ್ ಗೋಸ್ವಾಮಿ ಅವರ ಹೆಸರುಗಳು ಆರೋಪಿಗಳ ಪಟ್ಟಿಯಲ್ಲಿ ಏಕಿಲ್ಲ ಎಂದು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ. 

"ಮುಂಬೈ ಪೊಲೀಸರು ಟಿಆರ್ ಪಿ ಹಗರಣದಲ್ಲಿ ಅರ್ನಬ್ ಗೋಸ್ವಾಮಿ ಹಾಗೂ ರಿಪಬ್ಲಿಕ್ ಟಿವಿ ವಿರುದ್ಧ ಪ್ರಕ್ರಿಯೆಗಳನ್ನು ಮುಂದುವರೆಸುತ್ತಾರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ನೀಡುವಂತೆ ನ್ಯಾ.ಎಸ್ಎಸ್ ಶಿಂಧೆ, ಮನೀಷ್ ಪಿತಾಲೆ ಅವರಿದ್ದ ಪೀಠ ಮುಂಬೈ ನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಎಸ್ ಪಿ) ಶಿಶಿರ್ ಹಿರೇ ಅವರಿಗೆ ನಿರ್ದೇಶನ ನೀಡಿದೆ. 

"ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸುವುದಕ್ಕೆ ಇನ್ನೂ ಎಷ್ಟು ಸಮಯ ಬೇಕಾಗುತ್ತದೆ ಎಂದು ಕೋರ್ಟ್ ಗೆ ಹೇಳಿ" ಎಂದೂ ಶಿಶಿರ್ ಹಿರೇ ಅವರಿಗೆ ಕೋರ್ಟ್ ಸೂಚನೆ ನೀಡಿದೆ. 

"ಪ್ರಕರಣದಲ್ಲಿ ಮೂರು ತಿಂಗಳಿನಿಂದಲೂ ತನಿಖೆ ನಡೆಯುತ್ತಿದೆ. ಎರಡು ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ. ಅವರ ವಿರುದ್ಧ ಸಾಕ್ಷ್ಯಗಳು ಇರುವಂತೆ ಕಾಣುತ್ತಿಲ್ಲ. ಇದು ಮಾರ್ಚ್ 2021, ಆದರೆ ಎಫ್ಐಆರ್ ಅಕ್ಟೋಬರ್ 2020 ರಲ್ಲಿ ದಾಖಲಿಸಲಾಗಿದೆ, ಅರ್ನಬ್ ಗೋಸ್ವಾಮಿ, ರಿಪಬ್ಲಿಕ್ ನ್ನು ಆರೋಪಪಟ್ಟಿಯಲ್ಲೂ ಸೇರಿಸಲಾಗಿಲ್ಲ. ಅವರ ತಲೆ ಮೇಲೆ ತೂಗುಗತ್ತಿ ಏಕೆ? ಎಂದು ಕೋರ್ಟ್ ಪ್ರಶ್ನಿಸಿದೆ. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp