63 ಎನ್ ಕೌಂಟರ್, ರಾಜಕೀಯ ಪ್ರಭಾವ: ಬಂಧನದಲ್ಲಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ

ಉದ್ಯಮಿ ಅಂಬಾನಿ ಅವರ ನಿವಾಸದೆದುರು ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಘಟನೆಗೆ ಸಂಬಂಧಪಟ್ಟಂತೆ ಮುಂಬೈ ನ ಪೊಲೀಸ್ ಅಧಿಕಾರಿ ಸಚಿನ್ ವಾಜೆ ರಾಜಕೀಯವಾಗಿ ಪ್ರಭಾವಿಯಾಗಿರುವ, ಈ ವರೆಗೂ 63 ಎನ್ ಕೌಂಟರ್ ಗಳಲ್ಲಿ ಭಾಗಿಯಾಗಿರುವ ಅಧಿಕಾರಿಯಾಗಿದ್ದಾರೆ. 

Published: 18th March 2021 08:25 PM  |   Last Updated: 19th March 2021 12:59 PM   |  A+A-


Police officer Sachin Waze being taken to court in Mumbai |Pti

ಪೊಲೀಸ್ ಅಧಿಕಾರಿ ಸಚಿನ್ ವಾಜೆ

The New Indian Express

ಮುಂಬೈ: ಉದ್ಯಮಿ ಅಂಬಾನಿ ಅವರ ನಿವಾಸದೆದುರು ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಘಟನೆಗೆ ಸಂಬಂಧಪಟ್ಟಂತೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ರಾಜಕೀಯವಾಗಿ ಪ್ರಭಾವಿಯಾಗಿರುವ, ಈ ವರೆಗೂ 63 ಎನ್ ಕೌಂಟರ್ ಗಳಲ್ಲಿ ಭಾಗಿಯಾಗಿರುವ ಅಧಿಕಾರಿಯಾಗಿದ್ದಾರೆ. 

1990  ರಲ್ಲಿ ನಕ್ಸಲರು ಹೆಚ್ಚಾಗಿರುವ ವಿದರ್ಭದ ಚಂದ್ರಪುರದಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆಯಿಂದ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. 

ನಂತರ ಥಾಣೆ ಹಾಗೂ ಮುಂಬೈ ಗಳಿಗೆ ವರ್ಗಾವಣೆಯಾದ ಸಚಿನ್ ವಾಜೆ, ಹಲವು ಸಂಕೀರ್ಣ ಪ್ರಕರಣಗಳನ್ನು ಭೇದಿಸಿ ಖ್ಯಾತಿ ಗಳಿಸಿದ್ದರು. ಮತ್ತೋರ್ವ ಎನ್ ಕೌಂಟರ್ ಸ್ಪೆಷಲಿಸ್ಟ್  ಪ್ರದೀಪ್ ಶರ್ಮ ವಾಜೆಗೆ ಮಾರ್ಗದರ್ಶಕರಾಗಿದ್ದರು. 

2002 ರಲ್ಲಿ ನಡೆದಿದ್ದ ಘಾಟ್ಕೋಪರ್ ಬಾಂಬ್ ಸ್ಫೋಟದ ಆರೋಪಿ, ಬಂಧನಕ್ಕೊಳಗಾಗಿದ್ದ ಖ್ವಾಜಾ ಯೂನಸ್ ನ ಸಾವಿನ ಘಟನೆಯ ನಂತರ 2003-2004 ರಲ್ಲಿ ವಾಜೆಯನ್ನು ಬಾಂಬೆ ಹೈಕೋರ್ಟ್ ಅಮಾನತುಗೊಳಿಸಿತ್ತು. ಆಗ ವಾಜೆ ಬೆನ್ನಿಗೆ ನಿಂತಿದ್ದ ಬಿಜೆಪಿ ಈಗ ವಾಜೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದೆ. 

ಅಮಾನತುಗೊಂಡ ನಂತರದ ದಿನಗಳಲ್ಲಿ ಅಂದರೆ 2009 ರಲ್ಲಿ ಶಿವಸೇನೆ ಸೇರಿದರು ಅದಾದ 16 ವರ್ಷಗಳ ಬಳಿಕ ಪುನಃ ಪೊಲೀಸ್ ಇಲಾಖೆಗೆ ಸೇರಿದ್ದಷ್ಟೇ ಅಲ್ಲದೇ ಉದ್ಧವ್ ಠಾಕ್ರೆ ಸರ್ಕಾರ ವಾಜೆಗೆ ಮಹತ್ವದ ಪ್ರಕರಣಗಳ ತನಿಖೆಯ ಹೊಣೆಗಾರಿಕೆ ವಹಿಸಿತ್ತು. 

ಹಿರಿಯ ಪತ್ರಕರ್ತ ಎಸ್ ಬಾಲಕೃಷ್ಣನ್ ನೀಡಿರುವ ಮಾಹಿತಿಯ ಪ್ರಕಾರ, "ವಾಜೆ ಅಕ್ಷರಶಃ ಮುಂಬೈ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಆಯುಕ್ತರನ್ನು ಬಿಟ್ಟರೆ ಎರಡನೇ ಅತ್ಯಂತ ಪ್ರಭಾವಿ ಅಧಿಕಾರಿಯಾಗಿದ್ದರು. ವಾಜೆ ಎಪಿಐ ಆಗಿದ್ದರೂ ಸಹ ಡೆಪ್ಯುಟಿ ಮಟ್ಟದ ಅಧಿಕಾರಿಗಳೂ ಅವರಿಗಾಗಿ ಕ್ಯಾಬಿನ್ ನಲ್ಲಿ ಕಾಯುತ್ತಿರುವಂತಹ ವಾತಾವರಣ ಇರುತ್ತಿತ್ತು. 

ರಾಜಕೀಯ ನಾಯಕರ ಬೆಂಬಲದಿಂದ ಅತ್ಯಂತ ಪ್ರಭಾವಿ ಅಧಿಕಾರಿಯಾಗಿದ್ದ ವಾಜೆ,  ಸೈಬರ್ ಕ್ರೈಮ್, ಫೋನ್ ಟ್ಯಾಪಿಂಗ್, ಇ-ಮೇಲ್ ಗಳನ್ನು ಹ್ಯಾಕ್ ಮಾಡುವುದು, ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ ಮಾಡುವುದರಲ್ಲಿ ಅತ್ಯಂತ ನಿಪುಣರಾಗಿದ್ದರು, ಅಮಾನತುಗೊಂಡ ಅವಧಿಯಲ್ಲಿ ಅವರದ್ದೇ ಆದ ಸೈಬರ್ ಭದ್ರತಾ ಡಿಟೆಕ್ಟೀವ್ ಸಂಸ್ಥೆಯನ್ನೂ ನಡೆಸುತ್ತಿದ್ದರು. 

ಸಂಘಟಿತ ಭೂಗತ ಅಪರಾಧಗಳನ್ನು ನಿಯಂತ್ರಿಸುವುದಕ್ಕಾಗಿ ಐಪಿಎಸ್ ಲಾಬಿ ವಾಜೆ ಅವರಿಗೆ ಬಡ್ತಿ ನೀಡಿತ್ತು. ಒಮ್ಮೆ ಸಂಘಟಿತ ಅಪರಾಧಗಳು ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿದ್ದ ವಾಜೆ ರೀತಿಯ ಅಧಿಕಾರಿಗಳು ಉದ್ಯಮಿಗಳನ್ನು ಬೆದರಿಸಿ ಹಣ ಮಾಡುವುದಕ್ಕೆ ನಿಂತರು ಎನ್ನುತ್ತಾರೆ ಹಿರಿಯ ಪತ್ರಕರ್ತ ಎಸ್ ಬಾಲಕೃಷ್ಣನ್.

"ವಾಜೆ ಶಿವಸೇನೆ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರು. ಕೇಂದ್ರ ಬಿಜೆಪಿಯ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಕಾರಣ  ರಿಪಬ್ಲಿಕ್ ಟಿಚಿ ಹಾಗೂ ಅರ್ನಬ್ ಗೋಸ್ವಾಮಿ ಅವರ ವಿರುದ್ಧದ ಪ್ರಕರಣದಲ್ಲಿ ಬಂಧನಕ್ಕೆ ಯಾವ ಅಧಿಕಾರಿಯೂ ಮುಂದಾಗಿರಲಿಲ್ಲ. ಆದರೆ ವಾಜೆ ಅರ್ನಬ್ ಗೋಸ್ವಾಮಿಯನ್ನು ಬಂಧಿಸಿದ್ದರು. ಈ ಧೈರ್ಯ ಅವರ ಅತ್ಯುತ್ತಮ ಗುಣ, ಆದರೆ ಅವರು ಅದನ್ನು ಹೆಚ್ಚಾಗಿ ಸ್ವಾರ್ಥಕ್ಕೆ ಬಳಸಿಕೊಂಡರು" ಎಂದು ಬಾಲಕೃಷ್ಣನ್ ಹೇಳುತ್ತಾರೆ. 


Stay up to date on all the latest ರಾಷ್ಟ್ರೀಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp