ಒಂದು ವರ್ಷದೊಳಗೆ ದೇಶದಲ್ಲಿನ ಎಲ್ಲ ಟೋಲ್ ಬೂತ್ ತೆರವು: ನಿತಿನ್ ಗಡ್ಕರಿ
ಒಂದು ವರ್ಷದೊಳಗೆ ದೇಶದಲ್ಲಿನ ಎಲ್ಲ ಟೋಲ್ ಬೂತ್ ತೆರವುಗೊಳಿಸಿ, ಸಂಪೂರ್ಣ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಅನುಷ್ಠಾನಗೊಳಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.
Published: 18th March 2021 06:11 PM | Last Updated: 18th March 2021 07:47 PM | A+A A-

ಕೇಂದ್ರ ಸಚಿವ ನಿತಿನ್ ಗಡ್ಕರಿ
ನವದೆಹಲಿ: ಒಂದು ವರ್ಷದೊಳಗೆ ದೇಶದಲ್ಲಿನ ಎಲ್ಲ ಟೋಲ್ ಬೂತ್ ತೆರವುಗೊಳಿಸಿ, ಸಂಪೂರ್ಣ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಅನುಷ್ಠಾನಗೊಳಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.
ಶೇ.93 ರಷ್ಟು ವಾಹನಗಳು ಟೋಲ್ ಪಾವತಿಗೆ ಫಾಸ್ಟ್ ಟ್ಯಾಗ್ ಬಳಸುತ್ತಿವೆ. ಆದರೆ, ಉಳಿದ ಶೇ.7 ರಷ್ಟು ವಾಹನಗಳು ಈಗಲೂ ಕೂಡಾ ಫಾಸ್ಟ್ ಟ್ಯಾಗ್ ಬಳಸದೆ ದುಪ್ಪಟ್ಟು ಟೋಲ್ ಪಾವತಿಸುತ್ತಿವೆ ಎಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ತಿಳಿಸಿದ ನಿತಿನ್ ಗಡ್ಕರಿ, ಒಂದು ವರ್ಷದೊಳಗೆ ದೇಶದಲ್ಲಿನ ಎಲ್ಲ ಟೋಲ್ ಫ್ಲಾಜಾಗಳನ್ನು ತೆರವುಗೊಳಿಸುವುದಾಗಿ ಸದನಕ್ಕೆ ಭರವಸೆ ನೀಡುತ್ತೇನೆ. ಅಂದರೆ ಜಿಪಿಎಸ್ ಮೂಲಕ ಟೋಲ್ ಸಂಗ್ರಹ ಆಗಲಿದೆ. ಜಿಪಿಎಸ್ ಆಧರಿತವಾಗಿ ಹಣ ಸಂಗ್ರಹಿಸಲಾಗುವುದು ಎಂದು ಹೇಳಿದರು.
ಫಾಸ್ಟ್ ಟ್ಯಾಗ್ ಬಳಸದ ವಾಹನಗಳ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡರೆ, ಟೋಲ್ ಕಳ್ಳತನ, ಜಿಎಸ್ ಟಿಯಿಂದ ತಪ್ಪಿಸಿಕೊಳ್ಳುವಂತಹ ಕೇಸ್ ಗಳು ಕಂಡುಬರುವುದಿಲ್ಲ. ಟೋಲ್ ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಶುಲ್ಕವನ್ನು ಪಾವತಿಸಲು ಅನುಕೂಲವಾಗುವ ಫಾಸ್ಟ್ಟ್ಯಾಗ್ಗಳನ್ನು 2016 ರಲ್ಲಿ ಪರಿಚಯಿಸಲಾಯಿತು.
ಟ್ಯಾಗ್ಗಳನ್ನು ಕಡ್ಡಾಯಗೊಳಿಸುವುದರಿಂದ ಟೋಲ್ ಪ್ಲಾಜಾಗಳ ಮೂಲಕ ವಾಹನಗಳು ಮನಬಂದಂತೆ ಹಾದುಹೋಗುವುದನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಏಕೆಂದರೆ ಶುಲ್ಕ ಪಾವತಿಯನ್ನು ವಿದ್ಯುನ್ಮಾನವಾಗಿ ಮಾಡಲಾಗುತ್ತದೆ. ಹೊಸ ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿದರೆ, ಹಳೆಯ ವಾಹನಗಳಿಗೆ ಉಚಿತ ಫಾಸ್ಟ್ಟ್ಯಾಗ್ ನೀಡುವುದಾಗಿ ಸರ್ಕಾರ ಹೇಳಿದೆ ಎಂದು ಗಡ್ಕರಿ ಹೇಳಿದ್ದಾರೆ.