ಕೊರೋನಾ ಹೆಚ್ಚಳ: 9 ಜಿಲ್ಲೆಗಳಲ್ಲಿ 2 ಗಂಟೆ ಹೆಚ್ಚುವರಿ ನೈಟ್ ಕರ್ಫ್ಯೂ ಘೋಷಿಸಿದ ಪಂಜಾಬ್ ಸಿಎಂ!
ತಿಂಗಳೂಗಳ ಬಳಿಕ ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಹಲವು ರಾಜ್ಯಗಳು ನೈಟ್ ಕರ್ಫ್ಯೂವನ್ನು ಘೋಷಿಸಿವೆ. ಈ ನಡುವೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಸಹ ಕೊರೋನಾ ಪೀಡಿತ ಜಿಲ್ಲೆಗಳಲ್ಲಿ 2 ಗಂಟೆ ಹೆಚ್ಚುವರಿ ನೈಟ್ ಕರ್ಫ್ಯೂವನ್ನು ಘೋಷಿಸಿದ್ದಾರೆ.
Published: 18th March 2021 05:26 PM | Last Updated: 18th March 2021 05:26 PM | A+A A-

ಅಮರೀಂದರ್ ಸಿಂಗ್
ಚಂಢಿಗಡ: ತಿಂಗಳೂಗಳ ಬಳಿಕ ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಹಲವು ರಾಜ್ಯಗಳು ನೈಟ್ ಕರ್ಫ್ಯೂವನ್ನು ಘೋಷಿಸಿವೆ. ಈ ನಡುವೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಸಹ ಕೊರೋನಾ ಪೀಡಿತ ಜಿಲ್ಲೆಗಳಲ್ಲಿ 2 ಗಂಟೆ ಹೆಚ್ಚುವರಿ ನೈಟ್ ಕರ್ಫ್ಯೂವನ್ನು ಘೋಷಿಸಿದ್ದಾರೆ.
ಪಂಜಾಬ್ ನ ಲೂಧಿಯಾನ, ಜಲಾಂಧರ್, ಪಟ್ಯಾಲ, ಮೋಹಾಲಿ, ಅಮೃತಸರ್, ಗುರುದಾಸ್ ಪುರ, ಹೊಸಿಯಾರ್ ಪುರ್, ಕಪೂರ್ತಾಲಾ ಮತ್ತು ರೊಪರ್ ಜಿಲ್ಲೆಗಳಲ್ಲಿ ದಿನಕ್ಕೆ 100ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂವನ್ನು ಘೋಷಿಸಲಾಗಿದೆ.
ಕಳೆದ 24 ಗಂಟೆಯಲ್ಲಿ ಪಂಜಾಬ್ ನಲ್ಲಿ 2,039 ಕೊರೋನಾ ಪ್ರಕರಣಗಳು ವರದಿಯಾಗಿದ್ದು 35 ಜನರು ಮೃತಪಟ್ಟಿದ್ದು ಇದರ ಬೆನ್ನಲ್ಲೇ ಪಂಜಾಬ್ ಸಿಎಂ ನೈಟ್ ಕರ್ಫ್ಯೂವನ್ನು ಘೋಷಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, 'ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಬಹಳ ಅಪಾಯಕಾರಿ. ಇಂದು ಸುಮಾರು 2000 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಹಲವಾರು ಕಠಿಣ ಕ್ರಮಗಳು ಮತ್ತು ನಿರ್ಬಂಧಗಳ ಹೇರುವ ಬಗ್ಗೆ ಎಚ್ಚರಿಸಿದ್ದಾರೆ.
ಕೊರೋನಾ ವೈರಸ್ ಅನ್ನು ನಿಭಾಯಿಸುವಾಗ, ಕೆಲವರು ಇಚ್ಛಿಸದಿದ್ದರೂ ನಾನು ತುಂಬಾ ಕಠಿಣವಾಗಿರುತ್ತೇನೆ. ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಇಂದಿನಿಂದ 11ಗಂಟೆಯ ಬದಲು ರಾತ್ರಿ 9 ಗಂಟೆಯಿಂದ ಕರ್ಫ್ಯೂ ಪ್ರಾರಂಭವಾಗಲಿದೆ ಎಂದರು.