ಹೊಸ ಸಿಜೆಐ ನೇಮಕ: ಶಿಫಾರಸು ಕಳಿಸಲು ಹಾಲಿ ಸಿಜೆಐ ಎಸ್.ಎ. ಬೋಬ್ಡೆಗೆ ಕೇಂದ್ರದ ಮನವಿ
ಸುಪ್ರೀಂ ಕೋರ್ಟ್ ನ ಹಾಲಿ ಮುಖ್ಯನ್ಯಾಯಾಧೀಶರಾದ ಎಸ್ಎ ಬೋಬ್ಡೆ ನಿವೃತ್ತಿಗೆ ಇನ್ನೊಂದು ತಿಂಗಳು ಬಾಕಿ ಇದ್ದು, ಹೊಸ ಸಿಜೆಐ ನೇಮಕಕ್ಕೆ ಪ್ರಕ್ರಿಯೆಗಳು ಚಾಲನೆ ಪಡೆದುಕೊಂಡಿವೆ.
Published: 20th March 2021 06:08 PM | Last Updated: 20th March 2021 06:15 PM | A+A A-

ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ
ನವದೆಹಲಿ: ಸುಪ್ರೀಂ ಕೋರ್ಟ್ ನ ಹಾಲಿ ಮುಖ್ಯನ್ಯಾಯಾಧೀಶರಾದ ಎಸ್ಎ ಬೋಬ್ಡೆ ನಿವೃತ್ತಿಗೆ ಇನ್ನೊಂದು ತಿಂಗಳು ಬಾಕಿ ಇದ್ದು, ಹೊಸ ಸಿಜೆಐ ನೇಮಕಕ್ಕೆ ಪ್ರಕ್ರಿಯೆಗಳು ಚಾಲನೆ ಪಡೆದುಕೊಂಡಿವೆ.
ಮುಂದಿನ ಸಿಜೆಐ ಯಾರಾಗಬೇಕೆಂಬುದನ್ನು ಶಿಫಾರಸು ಮಾಡಬೇಕೆಂದು ಕೇಂದ್ರ ಸರ್ಕಾರ ಹಾಲಿ ಸಿಜೆಐ ಎಸ್ಎ ಬೋಬ್ಡೆಗೆ ಮನವಿ ಮಾಡಿದೆ.
ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಾ.19 ರಂದು ನ್ಯಾ.ಎಸ್ಎ ಬೋಬ್ಡೆಗೆ ಪತ್ರ ಬರೆದಿದ್ದು, ಶಿಫಾರಸನ್ನು ಕೇಳಿದ್ದಾರೆ. ಎಸ್ಎ ಬೋಬ್ಡೆ ಏಪ್ರಿಲ್ 23 ಕ್ಕೆ ನಿವೃತ್ತರಾಗಲಿದ್ದಾರೆ. ಹೊಸ ಸಿಜೆಐ ನೇಮಕಕ್ಕೆ ಕಾನೂನು ಸಚಿವರು ಸೂಕ್ತ ಸಮಯದಲ್ಲಿ ಹಾಲಿ ಸಿಜೆಐ ನೇಮಕಕ್ಕೆ ಶಿಫಾರಸು ಕೇಳುವುದು, ಶಿಫಾರಸು ಬಂದ ಬಳಿಕ ಅದನ್ನು ಪ್ರಧಾನಿಗೆ ಕಳಿಸಿ, ಪ್ರಧಾನಿ ರಾಷ್ಟ್ರಪತಿಗಳಿಗೆ ಕಳಿಸುವುದು ಪ್ರಕ್ರಿಯೆಯ ಭಾಗವಾಗಿದೆ.
ನ್ಯಾ. ಎನ್.ವಿ. ರಮಣ ಈಗಿರುವ ನ್ಯಾಯಾಧೀಶರ ಪೈಕಿ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದು, ಆ.26, 2022 ರವರೆಗೂ ಕರ್ತವ್ಯ ಅವಧಿ ಹೊಂದಿದ್ದಾರೆ.