ಮನ್ಸುಖ್ ಹಿರೇನ್ ಅನುಮಾನಾಸ್ಪದ ಸಾವು ಪ್ರಕರಣ: ಎನ್‌ಐಎ ತನಿಖೆಗೆ ಹಸ್ತಾಂತರ, ಇಬ್ಬರ ಬಂಧನ

ಉದ್ಯಮಿ ಮುಖೇಶ್‍ ಅಂಬಾನಿ ಅವರ ನಿವಾಸದ ಬಳಿ ಪತ್ತೆಯಾಗಿದ್ದ, ಸ್ಫೋಟಕಗಳಿದ್ದ ವಾಹನದ ಮಾಲೀಕ ಮನ್‍ಸುಖ್‍ ಹಿರೇನ್‍ ಅವರ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಹಿಸಿಕೊಂಡಿದೆ.

Published: 21st March 2021 12:01 PM  |   Last Updated: 21st March 2021 12:08 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಮುಂಬೈ: ಉದ್ಯಮಿ ಮುಖೇಶ್‍ ಅಂಬಾನಿ ಅವರ ನಿವಾಸದ ಬಳಿ ಪತ್ತೆಯಾಗಿದ್ದ, ಸ್ಫೋಟಕಗಳಿದ್ದ ವಾಹನದ ಮಾಲೀಕ ಮನ್‍ಸುಖ್‍ ಹಿರೇನ್‍ ಅವರ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಹಿಸಿಕೊಂಡಿದೆ.

ಕೇಂದ್ರ ಗೃಹ ಸಚಿವಾಲಯ ಈ ಕುರಿತು ಎನ್‍ಐಎಗೆ ಸೂಚನೆ ನೀಡಿದೆ. ಇದುವರೆಗೂ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸ್‍ನ ಅಪರಾಧ ನಿಗ್ರಹ ಘಟಕ (ಎಟಿಎಸ್‍) ನಡೆಸುತ್ತಿತ್ತು. ಎನ್‍ಐಎ ಅಧಿಕಾರಿಗಳು ಈಗಾಗಲೇ ಎಟಿಎಸ್‍ ಅಧಿಕಾರಿಗಳನ್ನು ಸಂಪರ್ಕಿಸಿ ಪ್ರಕರಣದ ವಿವರವನ್ನೂ ಪಡೆದುಕೊಂಡಿದ್ದಾರೆ.

ಪುಣೆಯಲ್ಲಿ ಕಾರು ಬಿಡಿಭಾಗಗಳ ಮಾರಾಟದ ವ್ಯವಹಾರ ನಡೆಸುವ ಹಿರೇನ್ (48) ಮಾರ್ಚ್‌ 4ರಿಂದ ನಾಪತ್ತೆಯಾಗಿದ್ದರು. ಅವರ ಶವವು ನಂತರ ಶಂಕಾಸ್ಪದ ರೀತಿಯಲ್ಲಿ ಠಾಣೆಯ ಮುಂಬೈ-ಕಾಲ್ವಾದಲ್ಲಿ ರೇಟಿ ಬಂದರ್ ಸಮೀಪ ಪತ್ತೆಯಾಗಿತ್ತು.

ಮಹಾರಾಷ್ಟ್ರ ಎಟಿಎಸ್'ನಿಂದ ಇಬ್ಬರು ಆರೋಪಿಗಳ ಬಂಧನ
ಪ್ರಕರಣ ಸಂಬಂಧ ತನಿಖೆಯನ್ನು ಚುರುಕುಗೊಳಿಸಿರುವ ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. 

ಈ ಹಿಂದೆ ಕರ್ತವ್ಯದಿಂದ ಅಮಾನತುಗೊಂಡಿದ್ದ ಮುಂಬೈ ಪೊಲೀಸ್ ಪೇದೆ ವಿನಾಯಕ್ ಶಿಂಕ್ ಹಾಗೂ ನರೇಶ್ ಧಾರೆ ಎಂಬುವವರನ್ನು ಬಂಧನಕ್ಕೊಳಪಡಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp