ಪರಮ್​ವೀರ್ ಸಿಂಗ್ ಪತ್ರ ಅಧಿಕೃತ ಮೇಲ್ ಐಡಿಯಿಂದ ಬಂದಿಲ್ಲ, ಸಹಿಯೂ ಇರಲಿಲ್ಲ: ಮಹಾರಾಷ್ಟ್ರ ಸಿಎಂ ಕಚೇರಿ

ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್​ವೀರ್ ಸಿಂಗ್ ರದ್ದು ಎನ್ನಲಾಗುತ್ತಿರುವ ಪತ್ರ ಅಧಿಕೃತ ಮೇಲ್ ಐಡಿಯಿಂದ ಬಂದಿಲ್ಲ, ಸಹಿಯೂ ಇರಲಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕಚೇರಿ ಸ್ಪಷ್ಟನೆ ನೀಡಿದೆ.

Published: 21st March 2021 01:10 AM  |   Last Updated: 21st March 2021 01:10 AM   |  A+A-


uddhav thackeray

ಉದ್ದವ್ ಟಾಕ್ರೆ

Posted By : Srinivasamurthy VN
Source : PTI

ಮುಂಬೈ: ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್​ವೀರ್ ಸಿಂಗ್ ರದ್ದು ಎನ್ನಲಾಗುತ್ತಿರುವ ಪತ್ರ ಅಧಿಕೃತ ಮೇಲ್ ಐಡಿಯಿಂದ ಬಂದಿಲ್ಲ, ಸಹಿಯೂ ಇರಲಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕಚೇರಿ ಸ್ಪಷ್ಟನೆ ನೀಡಿದೆ.

ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಫೋಟಕ ವಾಹನದ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎನ್ನುವ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಮುಂಬೈ ನಗರ ಪೊಲೀಸ್‌ ಆಯುಕ್ತರಾಗಿದ್ದ ಪರಮ್ ಬೀರ್ ಸಿಂಗ್ ಅವರನ್ನು ಗೃಹ ರಕ್ಷಕ ದಳದ ಮುಖ್ಯಸ್ಥರನ್ನಾಗಿ ಗುರುವಾರವಷ್ಟೇ ವರ್ಗಾವಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಿಂಗ್ ಅವರು ತಿಂಗಳಿಗೆ 100 ಕೋಟಿ ರೂ ಲಂಚ ಸಂಗ್ರಹಿಸಿ ಕೊಡುವಂತೆ ಗೃಹ ಮಂತ್ರಿ ಅನಿಲ್ ದೇಶ್ ಮುಖ್ ರ ಆದೇಶವಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.

ಈ ಕುರಿತಂತೆ ಪರಮ್ ​ವೀರ್ ಸಿಂಗ್ ರದ್ದು ಎನ್ನಲಾಗುತ್ತಿರುವ ಪತ್ರ ಇದೀಗ ಮಹಾರಾಷ್ಟ್ರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದೆ. ಈ ಕುರಿತು ಇದೀಗ ಸ್ವತಃ ಸಿಎಂ ಉದ್ಧವ್ ಠಾಕ್ರೆ ಕಚೇರಿ ಸ್ಪಷ್ಟನೆ ನೀಡಿದ್ದು, ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್​ವೀರ್ ಸಿಂಗ್ ರದ್ದು ಎನ್ನಲಾಗುತ್ತಿರುವ ಪತ್ರ ಅಧಿಕೃತ ಮೇಲ್ ಐಡಿಯಿಂದ ಬಂದಿಲ್ಲ, ಸಹಿಯೂ ಇರಲಿಲ್ಲ ಎಂದು ಹೇಳಿದೆ. 

'ಪರಮ್ ​ವೀರ್ ಸಿಂಗ್ ಪತ್ರ ಇಂದು (ಮಾರ್ಚ್ 20) ಸಂಜೆ 4.37ಕ್ಕೆ ಬೇರೆ ಮೈಲ್ ವಿಳಾಸದಿಂದ ಬಂದಿದೆ. ಪರಮ್​ವೀರ್ ಸಿಂಗ್ ಅಧಿಕೃತ ಮೈಲ್ ವಿಳಾಸದ ಬದಲಾಗಿ ಬೇರೆ ವಿಳಾಸದಿಂದ ಬಂದಿದೆ. ಪತ್ರದಲ್ಲಿ ಪರಮ್​ವೀರ್ ಸಿಂಗ್ ಸಹಿ ಕೂಡ ಇರಲಿಲ್ಲ. ಹೊಸ ಇ-ಮೇಲ್ ವಿಳಾಸವನ್ನು ಪರಿಶೀಲಿಸಬೇಕಾಗಿದೆ. ಮಹಾರಾಷ್ಟ್ರ ಗೃಹ ಸಚಿವಾಲಯ ಈ ಬಗ್ಗೆ ಪರಮ್​ವೀರ್ ಸಿಂಗ್​ ರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.

ಪರಮ್ ಬೀರ್ ಸಿಂಗ್ ಅವರ ಪತ್ರ ವಿಚಾರ ಮಹಾರಾಷ್ಟ್ರದಲ್ಲಿ ಮತ್ತೊಂದು ಆಯಾಮ ಪಡೆದುಕೊಂಡಿದ್ದು, ಪರಮ್ ಬೀರ್ ಸಿಂಗ್ ಪತ್ರದ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಹೊರಟಿದೆ.

ಇದಕ್ಕೂ ಮೊದಲು ಪತ್ರದ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರೂ ಆಗಿರುವ ದೇವೇಂದ್ರ ಫಡ್ನವಿಸ್, ಗೃಹ ಸಚಿವರು ರಾಜೀನಾಮೆ ನೀಡಬೇಕು. ಒಂದುವೇಳೆ ಅನಿಲ್ ದೇಶ್​ಮುಖ್ ರಾಜೀನಾಮೆ ನೀಡದಿದ್ದರೆ ಖುದ್ದು ಮುಖ್ಯಮಂತ್ರಿ ಅವರು ಗೃಹ ಸಚಿವರನ್ನು ತೆಗೆದುಹಾಕಬೇಕು. ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp