ಗೃಹ ಸಚಿವರ ವಿರುದ್ಧ ಸಿಎಂ ಗೆ ಪತ್ರ ತಲುಪಿರುವುದು ನನ್ನ ಮೇಲ್ ಐಡಿಯಿಂದಲೇ: ಪರಮ್ ಬೀರ್ ಸಿಂಗ್

ದೇಶಾದ್ಯಂತ ಸುದ್ದಿಯಾಗುತ್ತಿರುವ ಮಹಾರಾಷ್ಟ್ರ ಗೃಹ ಸಚಿವರ ವಿರುದ್ಧದ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಅವರ ಪತ್ರದ ದೃಢೀಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಪೊಲೀಸ್ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. 

Published: 21st March 2021 01:30 PM  |   Last Updated: 21st March 2021 01:30 PM   |  A+A-


Letter to Maharashtra CM was sent from my email ID, says ex-Mumbai top cop Param Bir Singh

ಪರಮ್ ಬೀರ್ ಸಿಂಗ್

Posted By : Srinivas Rao BV
Source : The New Indian Express

ಮುಂಬೈ: ದೇಶಾದ್ಯಂತ ಸುದ್ದಿಯಾಗುತ್ತಿರುವ ಮಹಾರಾಷ್ಟ್ರ ಗೃಹ ಸಚಿವರ ವಿರುದ್ಧದ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಅವರ ಪತ್ರದ ದೃಢೀಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಪೊಲೀಸ್ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. 

ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ತಲುಪಿರುವುದು ನನ್ನ ಇ-ಮೇಲ್ ಐಡಿಯಿಂದಲೇ ಎಂದು ಪರಮ್ ಬೀರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. 

ಪತ್ರ ಬಂದಿರುವುದನ್ನು ಮಹಾರಾಷ್ಟ್ರ ಸಿಎಂ ಕಚೇರಿ ದೃಢೀಕರಿಸಿತ್ತಾದರೂ "ಈ ಪತ್ರ ಅಧಿಕೃತ ಮೇಲ್ ಐಡಿಯಿಂದ ಬಂದಿಲ್ಲ, ಸಹಿಯೂ ಇರಲಿಲ್ಲ ಎಂದು" ಹೇಳಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪರಮ್ ಬೀರ್ ಸಿಂಗ್, ಸಿಎಂ ಕಚೇರಿಗೆ ತಲುಪಿರುವ ಪತ್ರ ತಮ್ಮ ಇ-ಮೇಲ್ ಐಡಿಯಿಂದಲೇ ಎಂದು ಹೇಳಿದ್ದಾರೆ.

ತಿಂಗಳಿಗೆ 100 ಕೋಟಿ ರೂ ಲಂಚ ಸಂಗ್ರಹಿಸಿ ಕೊಡುವಂತೆ ಗೃಹ ಮಂತ್ರಿಗಳ ಆದೇಶವಿತ್ತು. ಮೋಹನ್‌ ದೆಲ್ಕರ್ ಆತ್ಮಹತ್ಯೆ ಪ್ರಕರಣದಲ್ಲಿ, ಕಾನೂನು ತಜ್ಞರ ಅಭಿಪ್ರಾಯವನ್ನೂ ಮೀರಿ ಎಫ್ಐಆರ್ ದಾಖಲಿಸುವಂತೆ ಗೃಹ ಸಚಿವರು ಸೂಚಿಸಿದ್ದರು ಎಂದು ಪರಮ್ ಬಿರ್ ಸಿಂಗ್ ಪತ್ರದಲ್ಲಿ ಆರೋಪಿಸಿದ್ದರು. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp