6 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಇಂಧನ ತೆರಿಗೆ ಸಂಗ್ರಹ ಶೇ.300 ರಷ್ಟು ಹೆಚ್ಚಳ..!

ತೈಲೋತ್ಪನ್ವಗಳ ದರಗಳ ಏರಿಕೆಯಿಂದಾಗಿ ಜನ ಸಾಮಾನ್ಯರು ಹೈರಾಣಾಗಿರುವಂತೆಯೇ ಇತ್ತ ಕಳೆದ ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರದ  ಇಂಧನ ತೆರಿಗೆ ಸಂಗ್ರಹ ಶೇ.300 ರಷ್ಟು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.

Published: 22nd March 2021 10:50 PM  |   Last Updated: 22nd March 2021 10:50 PM   |  A+A-


Petrol Rate

ಪೆಟ್ರೋಲ್ ದರ

Posted By : Srinivasamurthy VN
Source : PTI

ನವದೆಹಲಿ: ತೈಲೋತ್ಪನ್ವಗಳ ದರಗಳ ಏರಿಕೆಯಿಂದಾಗಿ ಜನ ಸಾಮಾನ್ಯರು ಹೈರಾಣಾಗಿರುವಂತೆಯೇ ಇತ್ತ ಕಳೆದ ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರದ  ಇಂಧನ ತೆರಿಗೆ ಸಂಗ್ರಹ ಶೇ.300 ರಷ್ಟು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಕೇಂದ್ರ ಸರ್ಕಾರವೇ ಮಾಹಿತಿ ನೀಡಿದ್ದು, ಕಳೆದ ಆರು ವರ್ಷಗಳ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಹೆಚ್ಚುವರಿ ಸುಂಕದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ.ಆದಾಯ ಹರಿದು ಬಂದಿದೆ. ಆರು ವರ್ಷಗಳ ಹಿಂದೆ ಇದ್ದ ಆದಾಯಕ್ಕೆ ಹೋಲಿಕೆ ಮಾಡಿಕೊಂಡರೆ ಇದು ಬರೊಬ್ಬರಿ ಶೇ.300 ರಷ್ಟು ಹೆಚ್ಚು ಎಂದು ಹೇಳಲಾಗಿದೆ.

ಈ ಬಗ್ಗೆ ಲೋಕಸಭೆಯಲ್ಲಿ ರಾಜ್ಯ ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ನೀಡಿರುವ ವರದಿಯನ್ವಯ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದರಿಂದ ಕಳೆದ ಆರು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸಂಗ್ರಹವು ಶೇಕಡಾ 300 ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

'2014-15ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಿಂದ 29,279 ಕೋಟಿ ರೂ. ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ 42,881 ಕೋಟಿ ರೂ. ಸಂಗ್ರಹವಾಗಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದ (2020-21) ಮೊದಲ 10 ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಸಂಗ್ರಹವು 2.94 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಲಿಖಿತ ರೂಪದಲ್ಲಿ ಅನುರಾಗ್ ಸಿಂಗ್ ಠಾಕೂರ್ ಮಾಹಿತಿ ನೀಡಿದ್ದಾರೆ.

2014-15ರಲ್ಲಿ ನೈಸರ್ಗಿಕ ಅನಿಲದ ಮೇಲಿನ ಅಬಕಾರಿ ಸುಂಕದಿಂದ ಕೇಂದ್ರ ಸರ್ಕಾರವು 74,158 ಕೋಟಿ ರೂ.ಸಂಗ್ರಹಿಸಿದ್ದು, ಇದು 2020ರ ಏಪ್ರಿಲ್‌ ಮತ್ತು 20 ಜನವರಿ 2021ರ ಅವಧಿಯಲ್ಲಿ 2.95 ಲಕ್ಷ ಕೋಟಿ ರೂ.ಗೆ ಏರಿದೆ. ಸ್ವತಃ ಸಚಿವರು ತಿಳಿಸಿರುವಂತೆ ಒಟ್ಟು ಆದಾಯದ ಶೇಕಡಾವಾರು ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲದ ಮೇಲೆ ಸಂಗ್ರಹಿಸಿದ ತೆರಿಗೆಗಳು ಶೇಕಡಾ 5. 4ರಿಂದ ಶೇಕಡಾ 12.2 ಕ್ಕೆ ಏರಿಕೆಯಾಗಿದೆ.

2014 ರಲ್ಲಿ ಪೆಟ್ರೋಲ್ ಮೇಲಿನ ಸುಂಕವನ್ನ 9.48 ರೂ.ಗಳಿಂದ 32.90 ರೂಪಾಯಿಗೆ ಹೆಚ್ಚಿಸಲಾಗಿದೆ. ಇದೇ ಅವಧಿಗೆ ಡೀಸೆಲ್ ಮೇಲಿನ ಸುಂಕವನ್ನ ಪ್ರತಿ ಲೀಟರ್‍ ಗೆ 3.56 ರಿಂದ 31.80 ರೂ.ಗೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂತೆಯೇ ಪ್ರಸ್ತುತ ಹಣಕಾಸಿನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಮತ್ತು ಇತರೆ ಅಭಿವೃದ್ಧಿ ವೆಚ್ಚಗಳ ಸಂಪನ್ಮೂಲಗಳನ್ನು ಉತ್ಪಾದಿಸಲು ಅಬಕಾರಿ ಸುಂಕ ದರಗಳನ್ನು ಮರು ಮಾಪನಾಂಕ ಮಾಡಲಾಗಿದೆ ಎಂದು ಸಚಿವರು ತಿಳಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp